ಮಡಿಕೇರಿ, ಡಿ. 6: ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಪರಿವರ್ತನಾ ಸಂಘ ನಿಯಮಿತ, ಮೂರ್ನಾಡು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪೆಬ್ಬಾಟಂಡ ಎ. ಪೆಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಮುಂಡಂಡ ಕೆ. ಕುಟ್ಟಪ್ಪ ಅವರುಗಳು ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಪುದಿಯೊಕ್ಕಡ ಎಸ್. ಸೋಮಯ್ಯ, ಬಡುವಂಡÀ ಎ. ಚಿಣ್ಣಪ್ಪ, ವಾಂಚೀರ ಎ. ಸುಭಾಷ್, ಅಲ್ಮಚಂಡ ಎ. ಮೊಣ್ಣಪ್ಪ, ಮೂಡೆರ ಡಿ. ಅಯ್ಯಪ್ಪ, ಮೂಡೆರ ಕೆ. ಮಾದಪ್ಪ, ಉಳುವಾರನ ಎಸ್. ರಾಧಾಕೃಷ್ಣ, ತೆಕ್ಕಡೆ ಶೋಭಾ ಮೋಹನ್, ಕೈಪಟ್ಟಿರ ಸಿ. ಭಾರತಿ, ಆಂಗಿರ ಎಂ. ಮಾದಪ್ಪ, ಅಮ್ಮಣಂಡ ಪಿ. ಪೂಣಚ್ಚ, ಎಂ.ಟಿ. ದೇವಪ್ಪ, ಹೆಚ್.ಎಂ. ಬೊಳ್ಳು ಅವರುಗಳು ಆಯ್ಕೆಗೊಂಡಿದ್ದು, ಎಲ್ಲರೂ ಬಿಜೆಪಿ ಬೆಂಬಲಿತರಾಗಿದ್ದಾರೆ.