ಕೂಡಿಗೆ, ಡಿ. 6: ಹಬ್ಬಾಲೆ ಶ್ರೀ ಬನಶಂಕರಿ ಅಮ್ಮನವರ ಹಬ್ಬ ಹಾಗೂ ಜಾತ್ರೋತ್ಸವ ಕಾರ್ಯಕ್ರಮ ತಾ. 7 ರಂದು (ಇಂದು) ದೇವಾಲಯ ಆವರಣದಲ್ಲಿ ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ ವಿವಿಧ ಹೋಮಗಳು, 12 ಗಂಟೆಗೆ ಅಭಿಷೇಕ ಮಹಾಪೂಜೆ, ಸಂಜೆ ಹಣ್ಣುತುಪ್ಪ ನೈವೇದ್ಯ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ವಿದ್ಯುತ್ ಅಲಂಕೃತ ಮಂಟಪಗಳಲ್ಲಿ 6 ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ನಂತರ ಮರುದಿನ ವಿವಿಧ ಕ್ರೀಡಾ ಕೂಟಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ತಿಳಿಸಿದೆ.