ಕೂಡಿಗೆ, ನ.25 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ವ್ಯಾಪ್ತಿಯ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ರೈತರುಗಳ ಜಮೀನಿನಲ್ಲಿ ಕಾಡಾನೆಗಳು ತಿಂದು, ತುಳಿದು ನಷ್ಟಪಡಿಸಿವೆ. ಕಾಡಾನೆಗಳು ಬಾಣಾವರ ಅಂಚಿನಲ್ಲಿ ಸಾಗಿ ಬಂದು ಆನೆ ಕಂದಕವನ್ನು ದಾಟಿ ಸೀಗೆಹೊಸೂರು ಗ್ರಾಮದತ್ತ ಬಂದು, ಈ ವ್ಯಾಪ್ತಿಯ ಜಗದೀಶ್, ಪ್ರವೀಣ, ನಾಗೇಶ, ಕೃಷ್ಣ, ಹರೀಶ್ ಹಾಗೂ ಇನ್ನೂ ಅನೇಕ ರೈತರುಗಳ ಗದ್ದೆಗಳಿಗೆ ಧಾಳಿ ಮಾಡಿವೆ. ಅಪಾರ ಭತ್ತದ ಬೆಳೆ ಯನ್ನು ತುಳಿದು ತಿಂದು ನಷ್ಟಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಈ ವ್ಯಾಪ್ತಿಯ ರೈತರು ಆಗ್ರಹಪಡಿಸಿದ್ದಾರೆ.