*ಸಿದ್ದಾಪುರ, ನ. 25: ಸಮೀಪದ ನೆಲ್ಯಹುದಿಕೇರಿಯಲ್ಲಿರುವ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಹುತ್ತರಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಸುತ್ತಮುತ್ತಲ ಗ್ರಾಮಗಳ ಕೃಷಿಕರು ಸೇರಿದಂತೆ ಅನೇಕ ಭಕ್ತರು ಪೂಜೆ ಮತ್ತು ಕದಿರು ಕುಯ್ಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಶ್ರೀ ಮುತ್ತಪ್ಪ ವೆಳ್ಳಾಟಂ ಏರ್ಪಡಿಸಲಾಗಿತ್ತು. ಶ್ರೀ ಮುತ್ತಪ್ಪ ದೇವರ ಕೋಲದೊಂದಿಗೆ ಭಕ್ತರು ದೇವರ ಸ್ಮರಣೆಯೊಂದಿಗೆ ಸಾಗಿ ಗದ್ದೆಯಿಂದ ಕದಿರು ಕುಯ್ದು ಎಂದು ದೇವಸ್ಥಾನದಲ್ಲಿರಿಸಿ ಪೂಜೆ ನೆರವೇರಿಸಲಾಯಿತು. ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಾಲಚಂಡ ಚೀಯಣ್ಣ, ಆಡಳಿತ ಮಂಡಳಿಯ ಪ್ರಮುಖರಾದ ಟಿ.ಸಿ. ಅಶೋಕ್, ಟಿ.ಸಿ. ರಾಮನ್‍ಕುಟ್ಟಿ, ಕೆ.ಪಿ. ಶೇಖರ್, ಕೆ.ಪಿ. ಸುಕುಮಾರನ್, ಸುನಿಲ್ ಕುಮಾರ್, ಕೆ.ಪಿ. ರಾಜಪ್ಪ, ವಿ.ಕೆ. ಲೋಕೇಶ್, ಸೇತುರಾಮ ಚೆಟ್ಟಿಯಾರ್ ಹಾಗೂ ಇತರರು ಉಪಸ್ಥಿತರಿದ್ದರು.