ಸಿದ್ದಾಪುರ, ನ. 25: ಯುವಜನ ಕೇಂದ್ರ ಮಡಿಕೇರಿ ಹಾಗೂ ಮಾಲ್ದಾರೆಯ ಜನಪರ ಕಲಾ ಮತ್ತು ಕ್ರೀಡಾ ಯುವ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆಯನ್ನು ಚೆನ್ನಂಗಿ ಬಸವನಹಳ್ಳಿಯ ಸರಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳ ಲಾಯಿತು. ಇದರ ಪ್ರಯುಕ್ತ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಝಾನ್ಸಿ ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾಲಾ ಶಿಕ್ಷಕರುಗಳಾದ ನಿರಂಜನ್, ಪೂರ್ಣಿಮ ಮುಂತಾದವರು ಮಾತನಾಡಿದರು. ಕ್ರೀಡೆ ಸಾಮಗ್ರಿಗಳನ್ನು ಜನಪರ ಕಲಾ ಮತ್ತು ಕ್ರೀಡಾ ಯುವ ಸಂಘದ ಅಧ್ಯಕ್ಷ ಆಂಟೋನಿ ವಿತರಿಸಿದರು. ಕಾರ್ಯದರ್ಶಿ ಅಸೀಸ್ ಹಾಗೂ ಸದಸ್ಯರುಗಳಾದ ಜಸೀರ್, ಕಲಾವಿದ ಬಾವ ಮಾಲ್ದಾರೆ, ಹರಿಪ್ರಸಾದ್, ಆಲಿ, ವಿನಿಲ್, ಅಕ್ಷಿತ್, ಪುನೀತ್, ಸತೀಶ್, ಪ್ರವೀಣ್, ಜಮಿಲ್ ಇನ್ನಿತ ರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಬಾವ ಮಾಲ್ದಾರೆ ಕಾರ್ಯಕ್ರಮ ನಿರೂಪಿಸಿದರು.