ಮಡಿಕೇರಿ, ನ. 25: ಸಂಪಾಜೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕ್ರೀಡಾಕೂಟ ಜರುಗಿತು. ಅಲ್ಲಿನ ಲಯನ್ಸ್ ಅಧ್ಯಕ್ಷ ಪ್ರಶಾಂತ್ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಮಾಯಿಲಪ್ಪ, ಜಯರಾಮ ಊರುಬೈಲು, ಎಮ್.ಎಸ್. ಭಟ್, ಪದ್ಮಯ್ಯ ಬಿ.ಆರ್., ಜಗದೀಶ್ ರೈ ಹಾಗೂ ಕಾಲೇಜಿನ ಪ್ರಾಂಶುಪಾಲೆ ವೈ.ಕೆ. ಮಾಲತಿ, ಮುಖ್ಯ ಶಿಕ್ಷಕ ಐತ್ತಪ್ಪ ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಕೆ., ಲಯನ್ಸ್ ಕಾರ್ಯದರ್ಶಿ ನಳಿನಿ ಕಿಶೋರ್ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಕುಮಾರ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾ ವಿಜೇತರಿಗೆÉ ಪದಕಗಳನ್ನು ವಿತರಿಸಲಾಯಿತು.