ಮಡಿಕೇರಿ, ನ. 24: ಕೊಡಗು ಜಿಲ್ಲೆಯಾದ್ಯಂತ ಕಾರ್ತಿಕ ಮಾಸದ ಹುಣ್ಣಿಮೆಯಂದು ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ನಿನ್ನೆ ರಾತ್ರಿ ಹಾಗೂ ಇಂದು ಹಗಲು ವೇಳೆಯೂ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಯಿತು. ಹೊಸ ಬೆಳೆ ಭತ್ತವನ್ನು ಧನಲಕ್ಷ್ಮೀ ರೂಪದಲ್ಲಿ ಮನೆ ತುಂಬಿಸಿಕೊಂಡು ಪರಂಪರೆಯಿಂದ ಸಾಗಿ ಬಂದಂತೆ ಪೂಜಿಸುವ ಮೂಲಕ ಮನೆಯ ಆಯಕಟ್ಟುಗಳಲ್ಲಿ ಕದಿರು ಕಟ್ಟಿ ಎಳ್ಳಕ್ಕಿ ಹಿಟ್ಟು, (ತಂಬಿಟ್ಟು) ಪಾಯಸ ಸವಿಯಲಾಯಿತು.ಕೊಡಗಿನಾದ್ಯಂತ ದೇವನೆಲೆಗಳು ಹಾಗೂ ಮನೆ ಮನೆಗಳಲ್ಲಿ ಹುತ್ತರಿ ಕದಿರು ತೆಗೆಯುವದರೊಂದಿಗೆ ಅನೇಕ ಕಡೆಗಳಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸಾಮೂಹಿಕ ಆಚರಣೆಯಲ್ಲಿ ಜರುಗಿತು. ಈ ವೇಳೆ ಕೆಲವೆಡೆ ಮಳೆ ಜಿನುಗಿದರೆ, ಕೆಲವೆಡೆ ಮಳೆಯ ತೀವ್ರತೆ ಕದಿರು ತೆಗೆಯಲು ಕೂಡ ಅಡ್ಡಿಯಾದ ಮಾಹಿತಿ ಲಭಿಸಿದೆ. ಪಾಡಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವ
ನಾಪೆÇೀಕ್ಲು: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಬೆಳಿಗ್ಗೆ ದೇವತಕ್ಕ ಪರದಂಡ ಹಾಗೂ ಪೇರಿಯಂಡ ಕುಟುಂಬಸ್ಥರ ಬಲಿವಾಡು ಮತ್ತು ಎತ್ತೇರಾಟ ಆಗಮನದಿಂದ ದೇವಳದಲ್ಲಿ ಉತ್ಸವ ಆರಂಭಗೊಂಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರು ಸನ್ನಿಧಿಯಲ್ಲಿ ತುಲಾಭಾರ ಸೇವೆ, ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ಸಂಪ್ರದಾಯದಂತೆ ನಡೆಯಿತು.
ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿ ದರ್ಶನ. ಬಳಿಕ ಮೂರು ಮೈಲಿ ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ಉತ್ಸವ ಮೂರ್ತಿಯೊಂದಿಗೆ ತಕ್ಕ ಮುಖ್ಯಸ್ಥರು, ಭಕ್ತಾದಿಗಳು, ಎತ್ತೇರಾಟ, ದುಡಿಕೊಟ್ಟ್ ಪಾಟ್ಗಳೊಂದಿಗೆ ತೆರಳಿದರು. ಈ ಸಂದರ್ಭ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಭಕ್ತಾದಿಗಳು ಎತ್ತೇರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಮಲ್ಮ ಸನ್ನಿಧಿಯಲ್ಲಿ ದೇವರಿಗೆ ಪೂಜೆ, ಬಲಿ, ಬಾಳೋಪಾಟ್ ಸೇರಿದಂತೆ ದೈವಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ಪ್ರಸಾದ ವಿತರಣೆಯ ನಂತರ ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ಉತ್ಸವ ಸಂಪನ್ನಗೊಂಡಿತು.
ದೈವಿಕ ವಿಧಿವಿಧಾನಗಳನ್ನು ಅರ್ಚಕರುಗಳಾದ ಕುಶ ಭಟ್, ಜಗದೀಶ್, ಪ್ರಸಾದ್ ಮತ್ತಿತರರು ನೆರವೇರಿಸಿದರು. ಈ ಸಂದರ್ಭ ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತ ಜನಸಂಘದ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿಯ ಆಡಳಿತ ಮಂಡಳಿ, ಭಕ್ತಾದಿಗಳು ಪಾಲ್ಗೊಂಡಿದ್ದರು.
ನಾಪೆÇೀಕ್ಲು: ಕೊಡಗಿನ ಮಳೆ, ಬೆಳೆ ದೇವ ಎಂದು ಖ್ಯಾತಿ ಪಡೆದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಹುತ್ತರಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಲಾಯಿತು.
ಅಮ್ಮಂಗೇರಿಯ ಹತ್ತು ಕುಟುಂಬದ ಸದಸ್ಯರು ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ದುಡಿಕೊಟ್ಟ್ ಪಾಟ್, ತಳಿಯಕ್ಕಿ ಬೊಳಕ್ನೊಂದಿಗೆ ಪಾಲ್ಗೊಂಡಿದ್ದರು. ಪೆÇಂಗೇರ ಅಪ್ಪಣ್ಣ ಅವರ ಭತ್ತದ ಗದ್ದೆಯಲ್ಲಿ ಇಗ್ಗುತ್ತಪ್ಪ ದೇವರಿಗೆ ಧಾನ್ಯ ಲಕ್ಷ್ಮಿಯನ್ನು ಸಮರ್ಪಿಸುವ ಸಲುವಾಗಿ ಭತ್ತದ ಕದಿರನ್ನು ಅಂಬಲ ವಾಸಿ ಎನ್.ಜಿ. ಸುಬ್ರಮಣಿ ಕುಯ್ದು ಪೆÇಲಿ ಪೆÇಲಿ ದೇವ ಘೋಷಣೆಯೊಂದಿಗೆ ದೇವಳಕ್ಕೆ ತರಲಾಯಿತು. ನಂತರ ದೇವಳದಲ್ಲಿ ಧಾನ್ಯ ಲಕ್ಷ್ಮಿಗೆ ಪೂಜೆ ನೆರವೇರಿಸಿ, ಕದಿರು ವಿತರಿಸಿ, ಪ್ರಸಾದ ವಿನಿಯೋಗ ನಡೆಯಿತು.
ಈ ಸಂರ್ಭದಲ್ಲಿ ದೇವಳಕ್ಕೆ ಸಂಬಂಧಿಸಿದ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತ ವೃಂದ, ಅರ್ಚಕ ಕುಟುಂಬಗಳು ಹಾಗೂ ಸಿಬ್ಬಂದಿ ಇದ್ದರು.
ನಾಳೆ ಬಿದ್ದಾಟಂಡ ವಾಡೆ ಕೋಲ್
ತಾ. 26 ರಂದು (ನಾಳೆ) ನೂರಂಬಡ ನಾಡಿನ ಬಿದ್ದಾಟಂಡ ವಾಡೆಯ ಮಂದ್ನಲ್ಲಿ ಶ್ರೀ ಮಕ್ಕಿ ಶಾಸ್ತಾವು ದೇವರ ಕೋಲ್ ಮಂದ್ ನಡೆಯಲಿದೆ.
26 ರಂದು ನಾಡ್ ಮಂದ್ ಮತ್ತು 27ರಂದು ಸಣ್ಣ ಮಂದ್ ಹಾಗೂ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಕೋಲು ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ಓಂಕಾರೇಶ್ವರದಲ್ಲಿ ವಿಶೇಷ ಆಚರಣೆ
ಇಲ್ಲಿನ ಐತಿಹಾಸಿಕ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಸನ್ನಿಧಿಯಲ್ಲಿ ಈ ಬಾರಿಯ ಹುತ್ತರಿ ಆಚರಣೆ ವಿಶೇಷವಾಗಿತ್ತು. ಕಾರ್ತಿಕ ಮಾಸದ ಹುಣ್ಣಿಮೆಯಂದು ಜರುಗುವ ತೆಪ್ಪೋತ್ಸವ, ಪಲ್ಲಕಿ ಉತ್ಸವ,
(ಮೊದಲ ಪುಟದಿಂದ) ಮಂಟಪೋತ್ಸವ, ಮಹಾಪೂಜೆ ಸೇವೆಗಳು ಹುತ್ತರಿಯಂದೇ ಜರುಗಿದ್ದು, ಈ ಬಾರಿಯ ವಿಶೇಷವಾಗಿತ್ತು. ಮಡಿಕೇರಿಯ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್ ಹಾಗೂ ಮುತ್ತಮ್ಮ ದಂಪತಿ ಸೇವಾಕರ್ತರಿದ್ದರು.
ಆ ಬಳಿಕ ಸಂಪ್ರದಾಯದಂತೆ ವಾರ್ಷಿಕ ಹುತ್ತರಿ ಆಚರಣೆಯೊಂದಿಗೆ ದೇವ ಕದಿರು ತೆಗೆಯಲಾಯಿತು. ಐತಿಹಾಸಿಕ ಅರಮನೆ ಆವರಣದ ಶ್ರೀ ಕೋಟೆ ಗಣಪತಿ ಸನ್ನಿಧಿಗೆ ತೆರಳಿ ದೇವರಿಗೆ ಸಮರ್ಪಿಸುವದರೊಂದಿಗೆ ಮರಳಿ ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಕದಿರು-ತಂಬಿಟ್ಟು ಸಹಿತ ಪ್ರಸಾದ ನೀಡಲಾಯಿತು.
ಮಡಿಕೇರಿ ಕೊಡವ ಸಮಾಜದ ಸಹಕಾರದೊಂದಿಗೆ ಕದಿರು ತೆಗೆಯುವ ಸಂಪ್ರದಾಯವು ವಾಲಗ, ದುಡಿಪಾಟ್ ಸಹಿತ ಓಡಿಯಂಡ ಮಾದಪ್ಪ ಕುತ್ತಿ ಸಹಿತ ಸಾಂಪ್ರದಾಯಿಕ ನೆರೆಕಟ್ಟಿದರು. ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕ ಬಿ.ಜಿ. ನಾರಾಯಣ ಭಟ್ ನೇತೃತ್ವದಲ್ಲಿ ದೇವತಾ ಕೈಂಕರ್ಯಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯರುಗಳಾದ ಪ್ರಕಾಶ ಆಚಾರ್ಯ, ದಮಯಂತಿ, ಕೆ. ಸುನಿಲ್ ಕುಮಾರ್ ಸೇರಿದಂತೆ ಇತರ ಪ್ರಮುಖರು, ಕೊಡವ ಸಮಾಜದ ಪದಾಧಿಕಾರಿ ಗಳಾದ ಮಣವಟ್ಟಿರ ಚಿಣ್ಣಪ್ಪ, ಅರೆಯಡ ರಮೇಶ್, ಬೊಳ್ಳಜ್ಜೀರ ಅಯ್ಯಪ್ಪ, ತಕ್ಕ ಪಾಂಡಿರ ರವಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತ ಜನತೆ ಭಾಗಿಯಾಗಿದ್ದರು. ಈ ಸಲದ ಹುತ್ತರಿ ಕದಿರು ತೆಗೆಯುವ ವೇಳೆ ಹೂಮಳೆಯ ಅನುಭವವಾದದ್ದು ಒಂದೆಡೆಯಾದರೆ, ಮೂರ್ನಾಡು ಹಾಗೂ ಇತರೆಡೆ ಧಾರಾಕಾರ ಮಳೆ ಸುರಿದು ಆತಂಕ ಸೃಷ್ಟಿಸಿತ್ತು.
ಕೊಡವ ಸಮಾಜ: ಮಡಿಕೇರಿ ಕೊಡವ ಸಮಾಜದಿಂದ ಸಂಪ್ರದಾಯ ದಂತೆ ಕೊಂಬ್, ಕೊಟ್ಟ್ ವಾಲಗ ಸಹಿತ ವಿಶೇಷ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ಆಚರಿಸ ಲಾಯಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಆಚರಣೆಯಲ್ಲಿ ಕದಿರು ಪಡೆದು, ತಂಬಿಟ್ಟು ಸವಿದರು. ಸಮಾಜ ಬಾಂಧವರಿಗಾಗಿ ಕೊಡವ ಸಮಾಜದ ಆಡಳಿತ ಮಂಡಳಿ ವ್ಯವಸ್ಥೆ ರೂಪಿಸಿದ್ದು, ಪುರುಷ, ಮಹಿಳೆಯ ರಾದಿಯಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಚಿಣ್ಣರು ಕಾಣಿಸಿಕೊಂಡು ಗಮನ ಸೆಳೆದರು.
ಕೊಡವ ಸಮಾಜ ಹಾಗೂ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯು ಕದಿರು ಸಹಿತ ಜಂಟಿಯಾಗಿ ಸಾಗಿದ ಮೆರವಣಿಗೆಯಲ್ಲಿ ಪೊಲಿ... ಪೊಲಿಯೇ... ಬಾ... ಘೋಷಣೆಯೂ ಗಮನ ಸೆಳೆಯಿತು.
ಮಳೆಯ ನಡುವೆ ಹುತ್ತರಿ
ಭಾಗಮಂಡಲ: ಶ್ರೀ ಭಗಂಡೇಶ್ವರ ದೇವಾಲಯ ಸೇರಿದಂತೆ ಕೋರಂಗಾಲ, ಚೇರಂಗಾಲ, ತಣ್ಣಿಮಾನಿ, ತಾವೂರು ಮತ್ತು ಸುತ್ತಮುತ್ತ ತೀವ್ರ ಮಳೆಯ ನಡುವೆ ಹುತ್ತರಿ ಆಚರಣೆ ನೆರವೇರಿತು. ಆಯಾ ಗ್ರಾಮ ದೇವಾಲಯಗಳ ತಕ್ಕ ಮುಖ್ಯಸ್ಥರು, ಗ್ರಾಮಸ್ಥರೊಡಗೂಡಿ ಮಳೆಯಲ್ಲೇ ಕದಿರು ತೆಗೆಯಲಾಯಿತು. ಇಂದು ಅಲ್ಲಲ್ಲಿ ಪೂಜೆಯೊಂದಿಗೆ ಸಾಂಪ್ರದಾಯಿಕ ಹುತ್ತರಿ ಕೋಲಾಟ ವನ್ನು ಇಲ್ಲಿನ ನಾಡು ಮಂದ್ನಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು, ಪುರುಷ, ಮಹಿಳೆ, ಮಕ್ಕಳಾದಿಯಾಗಿ ಪಾಲ್ಗೊಂಡಿದ್ದರು.
ಗೌಡ ಸಮಾಜದಿಂದ ಆಚರಣೆ
ಮಡಿಕೇರಿ ನಗರ ಗೌಡ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಮಾಜದ ಕದಿರು ತೆಗೆಯುವ ಗದ್ದೆಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಬೊಟ್ಟೊಳಂಡ ರಾಜ ಕದಿರು ತೆಗೆದರು.
ಪೊಲಿಪೊಲಿ ದೇವ ಎಂಬ ಉದ್ಘೋಷಗಳು ಕೇಳಿಬಂದವು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕದಿರು ತೆಗೆದ ಬಳಿಕ ಕೊಡವ ಸಮಾಜದಲ್ಲಿ ಸಾರ್ವಜನಿಕರಿಗೆ ಕದಿರು ಹಂಚಲಾಯಿತು. ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟೀರ ಮಾಚಯ್ಯ, ಹುತ್ತರಿ ಸಮಿತಿ ಸಂಚಾಲಕ ಪಳಂಗಂಡ ಸತೀಶ್, ಎಂ.ಎಂ. ನರೇಂದ್ರ, ಮಣವಟ್ಟೀರ ನಂಜಪ್ಪ, ಬೊಳ್ಳಂಡ ದೇವಿದೇವಯ್ಯ, ಕಲ್ಲೆಂಗಡ ಪೂವಯ್ಯ, ಮೂವೇರ ಮುತ್ತಣ್ಣ, ಬೊಟ್ಟೋಳಂಡ ಗಣೇಶ್ ಮಣವಟ್ಟೀರ ಡಿಕ್ಕ, ಕುಂಚೆಟ್ಟೀರ ಸುಧಿ, ಚೆರುಮಂದಂಡ ಕುಶ, ಮೂವೆರ ಸಬಿತ, ಕುಂಚೆಟ್ಟಿರ ರೇಷ್ಮಾ, ಪಾಲೆಕಂಡ ಅಕ್ಕಮ್ಮ, ಸೇರಿದಂತೆ ಮಹಿಳೆಯರು ಮಕ್ಕಳು ಕದಿರಿನೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕುಶಾಲನಗರ ಗೌಡ ಸಮಾಜ
ಕುಶಾಲನಗರ: ಕುಶಾಲನಗರದ ಎಲ್ಲೆಡೆ ಹುತ್ತರಿ ಹಬ್ಬವನ್ನು ಸಂಭ್ರಮ ದೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಕುಶಾಲನಗರದ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬ ಆಚರಣೆ ನಡೆಯಿತು. ಸಮಾಜ ಬಾಂಧವರು ಮೆರವಣಿಗೆಯಲ್ಲಿ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹಾರಂಗಿ ರಸ್ತೆಯ ಕೊಡಗು ಗೌಡ ಯುವಕ ಸಂಘದ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಕದಿರು ಗುತ್ತಿಪೂಜೆಯನ್ನು ಕುಲ್ಲಚೆಟ್ಟಿ ಕಾಶಿಪೂವಯ್ಯ, ನೆರÀವೇರಿಸಿದರು. ಪಟಾಕಿ, ಸಿಡಿಮದ್ದುಗಳ ಭರಾಟೆ ಯೊಂದಿಗೆ ಹುತ್ತರಿ ಹಬ್ಬ ಸಾಂಪ್ರದಾಯಿಕವಾಗಿ ನಡೆಯಿತು. ಸಮುದಾಯ ಬಾಂಧವರಿಗೆ ಹಾಗೂ ಸಾರ್ವಜನಿಕÀರಿಗೆ ಕದಿರು ವಿತರಿಸ ಲಾಯಿತು.
ಈ ಸಂದರ್ಭ ಗೌಡ ಸಮಾಜ ಅಧ್ಯಕ್ಷ ಕೇಚಪ್ಪನ ಮೋಹನ್, ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕಾರ್ಯದರ್ಶಿ ಬೈಮನ ಪೊನ್ನಪ್ಪ, ಆಲುಗುಂಜ ಕೃಷ್ಣಮೂರ್ತಿ, ಪಟ್ಟಂದಿ ಬೀನಾ ಸೀತಾರಾಮ್, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೇಚಪ್ಪನ ಪ್ರಮೀಳ ಮೋಹನ್, ನಿರ್ದೇಶಕರುಗಳಾದ ಚೆರಿಯಮನೆ ಹರೀಶ್, ಚೀಯಂಡಿ ಶಾಂತಿ, ಕೂರನ ಪ್ರಕಾಶ್, ಮುದ್ಯನ ವಿಜಯಕುಮಾರ್, ಪೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಕವಿತಾ ಮೋಹನ್, ಸೇರಿದಂತೆ ಹೆಚ್ಚಿನ ನಾಗರಿಕರು ಪಾಲ್ಗೊಂಡಿದ್ದರು.
ಕೊಡವ ಸಮಾಜ
ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ವತಿಯಿಂದ ಹುತ್ತರಿ ಸ್ಥಳೀಯ ಕೊಡವ ಸಮಾಜದ ಆವರಣದಲ್ಲಿ ನಡೆಯಿತು. ನೆರೆಕಟ್ಟಿ ಪ್ರಾರ್ಥನೆ ನಂತರ ಸಮಾಜದ ಹಿರಿಯ ಬಲ್ಲಾರಂಡ ಜಾಲಿ ತಮ್ಮಯ್ಯ ಸಾಂಪ್ರದಾಯಿಕವಾಗಿ ಕದಿರು ತೆಗೆದು, ಸಮುದಾಯ ಬಾಂಧವರಿಗೆ ವಿತರಿಸಲಾಯಿತು.
ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ, ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಗೌರವ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಗೌಡಂಡ ಗಣೇಶ್ ದೇವಯ್ಯ, ನಿರ್ದೇಶಕರು ಸೇರಿದಂತೆ ಸಮಾಜದ ಪ್ರಮುಖರು ಇದ್ದರು.
ಸಂತ್ರಸ್ತರಿಂದ ಹುತ್ತರಿ
ಕುಶಾಲನಗರ: ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸಾಂತ್ವನ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರು ತಮ್ಮ ಮನೆಯಲ್ಲಿ ಹುತ್ತರಿ ಹಬ್ಬ ಆಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾವು ತಾತ್ಕಾಲಿಕವಾಗಿ ನೆಲೆಕಂಡಿರುವ ಸಾಂತ್ವನ ಕೇಂದ್ರದಲ್ಲಿ ಕದಿರು ಕಟ್ಟುವ ಮೂಲಕ ಹುತ್ತರಿಯನ್ನು ಸಾಮೂಹಿಕವಾಗಿ ಆಚರಣೆ ಮಾಡಿದ ದೃಶ್ಯ ಕಂಡುಬಂತು. ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ವಾಲ್ಮೀಕಿ ಕೇಂದ್ರದ ಸಮೀಪದ ಕೊಡಗು ಗೌಡ ಯುವಕ ಸಂಘದ ಗದ್ದೆಯಲ್ಲಿ ಕದಿರು ತೆಗೆಯುವ ಸಂದರ್ಭ ಅಲ್ಲಿಂದ ಕದಿರು ಸಂಗ್ರಹಿಸಿದ ವಾಲ್ಮೀಕಿ ಭವನದಲ್ಲಿರುವ ಸಂತ್ರಸ್ಥ ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಕದಿರು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಗೋಚರಿಸಿತು.
ಪ್ರತಿ ವರ್ಷ ತಮ್ಮ ಮನೆಯಲ್ಲಿ ಆಚರಣೆ ನಡೆಸಲಾಗುತ್ತಿತ್ತು. ಈ ಬಾರಿ ಪ್ರಕೃತಿ ವಿಕೋಪದಿಂದ ತಮ್ಮ ನೆಲೆ ಕಳೆದುಕೊಂಡ ಹಿನ್ನಲೆಯಲ್ಲಿ ಶಿಬಿರದಲ್ಲೇ ಆಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಮಕ್ಕಂದೂರು ಗ್ರಾಮದ ಮಹಿಳೆಯರು ತಮ್ಮ ನೋವನ್ನು ತೋಡಿಕೊಂಡರು.
ಹುದುಗೂರು ಗ್ರಾಮದಲ್ಲಿ ಹುತ್ತರಿ
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿಯ ವತಿಯಿಂದ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದÀರ್ಭ ಹುದುಗೂರು ಗ್ರಾಮದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಹುದುಗೂರು ಗ್ರಾಮದ ಗದ್ದೆಯಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಿ ದೇವಾಲಯದಲ್ಲಿ ನೆರೆಕಟ್ಟುವ ಮೂಲಕ ಚಾಲನೆ ನೀಡಿದರು. ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ವಿ.ಎಲ್. ಸುರೇಶ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಕೇರಿಯಲ್ಲಿ ಹುತ್ತರಿ
ಸೋಮವಾರಪೇಟೆ: ಸಮೀಪದ ತಾಕೇರಿ ಗ್ರಾಮದ ಶ್ರೀ ಈಶ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿ ವತಿಯಿಂದ ಶ್ರದ್ಧಾಭಕ್ತಿಯಿಂದ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.
ದೇವಾಲಯಲ್ಲಿ ಪೂಜೆ ನೆರವೇರಿಸಿದ ಗ್ರಾಮಸ್ಥರು, ವಾದ್ಯದೊಂದಿಗೆ ಊರಿನ ಗದ್ದೆಗೆ ತೆರಳಿ ಕದಿರು ತೆಗೆದರು. ಒಕ್ಕಲಿಗ ಜನಾಂಗದ ಸಾಂಪ್ರದಾಯಿಕ ಉಡುಗೆ ಧರಿಸಿದ ಹಿರಿಯರು ಮೆರವಣಿಗೆಯಲ್ಲಿ ಸಬ್ಬಮ್ಮ ಸುಗ್ಗಿದೇವರ ಬನಕ್ಕೆ ತೆರಳಿ ಕದಿರು ಕಟ್ಟಿದರು.
ಗಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು. ಮನೆಗೆ ತೆರಳಿ ಪೂಜೆ ಸಲ್ಲಿಸಿ, ಕದಿರು ಕಟ್ಟಿದರು. ಪ್ರಸಕ್ತ ವರ್ಷದ ಪ್ರಕೃತಿ ವಿಕೋಪದಿಂದ ಬೆಳೆಹಾನಿ ಅನುಭವಿಸಿರುವ ತಾಕೇರಿ, ಕಿರಗಂದೂರು, ಬಿಳಿಗೇರಿ ಗ್ರಾಮಸ್ಥರು ಹುತ್ತರಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ಕಾರ್ಯದರ್ಶಿ ಸುಮಂತ್, ಪದಾಧಿಕಾರಿಗಳಾದ ಆದರ್ಶ, ರಾಜ್ ಕುಮಾರ್, ಲಿಂಗಪ್ಪ, ಲೋಕೇಶ್, ನೀಲಮ್ಮ, ವೀರಭದ್ರ ಹಾಗು ಸುಗ್ಗಿದೇವರ ಪದಾಧಿಕಾರಿಗಳು ಇದ್ದರು.
ಕೊಡವ ಸಮಾಜ: ಕೊಡವ ಸಮಾಜದ ಅಧ್ಯಕ್ಷ ಮಾಳೇಟ್ಟಿರ ಬಿ. ಅಭಿಮನ್ಯು ಕುಮಾರ್ ನೇತೃತ್ವದಲ್ಲಿ ಅಂಜನೇಯ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆದು, ಪೂಜೆ ಸಲ್ಲಿಸಿ ನಂತರ ಜನಾಂಗ ಬಾಂಧವರಿಗೆ ವಿತರಿಸಲಾಯಿತು.
ಸಿ.ಎನ್.ಸಿ. ಆಚರಣೆ
ಕುಶಾಲನಗರ: ಕುಶಾಲನಗರ ಸಮೀಪ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪ ಅವರ ಗದ್ದೆಯಲ್ಲಿ ಸಿಎನ್ಸಿಯಿಂದ ಸಾಮೂಹಿಕ ಕದಿರು ತೆಗೆಯುವ ಮೂಲಕ ಸಾಂಪ್ರದಾಯಿಕವಾಗಿ ಹುತ್ತರಿ ಆಚರಣೆ ನಡೆಯಿತು.
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹುತ್ತರಿ ಸಾಮೂಹಿಕ ಕದಿರು ತೆಗೆಯುವ ಮೂಲಕ ಆಚರಿಸಲಾಯಿತು.
ಮನೆಯ ನೆಲ್ಲಕ್ಕಿ ಎದುರು 5 ಬಗೆಯ ಮರದ ಎಲೆಗಳಿಂದ ನೆರೆ ಕಟ್ಟಿದ ನಂತರ ಗುರುಕಾರಣರಿಗೆ ನೈವೇದ್ಯ ಅರ್ಪಿಸಿ ನಮನ ಸಲ್ಲಿಸಿ ಸಾಂಪ್ರದಾಯಿಕ ಕೊಡವ ಒಲಗದೊಂದಿಗೆ ಗದ್ದೆಗೆ ತೆರಳಿದರು. ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಸಕಲ ವಿಧಿವಿಧಾನಗಳೊಂದಿಗೆ “ಪೊಲಿ ಪೊಲಿಯೇ ದೇವಾ ಪೊಲಿಯೇ ಬಾ” ಉದ್ಗಾರ ದೊಂದಿಗೆ ಕದಿರು ತೆಗೆದರು.
ಸಾಂಪ್ರದಾಯಿಕ ಉಡುಪಿನಲ್ಲಿದ್ದ ಸಿಎನ್ಸಿ ಸದಸ್ಯರು ದೇವರಿಗೆ ನಮಿಸಿ ಕದಿರಿನೊಂದಿಗೆ ಮೆರವಣಿಗೆ ತೆರಳಿ ಕಣದಲ್ಲಿ ಕದಿರನ್ನು ಇಟ್ಟು ಪರೆಯಕಳಿ, ಕೋಲಾಟ, ವಾಲಗತ್ತಾಟ್, ದುಡಿಕೊಟ್ಟ್ ಪಾಟ್ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಸಿಎನ್ಸಿ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ವಿಜು ಅಚ್ಚಯ್ಯ, ಅಪ್ಪಣ್ಣ, ಕಲಿಯಂಡ ಪ್ರಕಾಶ್, ಪುಲ್ಲೇರ ಬೋಪಯ್ಯ, ಚೆಂಬಂಡ ಜನತ್, ಅರೆಯಡ ಗಿರೀಶ್, ಅಪ್ಪಾರಂಡ ಪ್ರಕಾಶ್, ಅಯಿಲಪಂಡ ಮಿಟ್ಟು, ಚಂಡಿರ ರಾಜ, ಕಾಂಡೇರ ಸುರೇಶ್, ಶಿರಿನ್, ಅಜ್ಜಿಕುಟ್ಟಿರ ಲೋಕೇಶ್, ಮಣವಟ್ಟಿರ ಮೋಟಯ್ಯ ಮತ್ತು ಸಿಎನ್ಸಿ ಸದಸ್ಯರು ಇದ್ದರು.
-ಪ್ರಭಾಕರ್, ದುಗ್ಗಳ, ಸಿಂಚು, ಲಕ್ಷ್ಮೀಶ, ಸುನಿಲ್ ಕೆ.ಡಿ., ನಾಗರಾಶೆಟ್ಟಿ, ವಿಜಯ್