ಭಾಗಮಂಡಲ, ನ. 22: ಭಾಗಮಂಡಲ - ನಾಪೋಕ್ಲು ಮುಖ್ಯರಸ್ತೆಯಲ್ಲಿರುವ ಅಂಬ್ರಾಟಿ ಬಳಿ ನೂತನ ಸೇತುವೆ ನಿರ್ಮಾಣಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ನೂತನ ಸೇತುವೆಯನ್ನು ಈಗಿರುವ ಸೇತುವೆಗಿಂತ ಎತ್ತರ ಮತ್ತು ಅಗಲವಾಗಿ ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವದು ಎಂದು ಇಂಜಿನಿಯರ್ ದೇವರಾಜ್ ತಿಳಿಸಿದ್ದಾರೆ.