ಗೋಣಿಕೊಪ್ಪ ವರದಿ, ನ. 22: ರೋಟರಿ ಕುಶಾಲನಗರ ವತಿಯಿಂದ ಆಯೋಜಿಸಿದ್ದ ವಲಯಮಟ್ಟದ ಸಾಂಸ್ಕøತಿಕ ಕಾರ್ಯಕ್ರಮವಾದ ಸುಗ್ಗಿ ಸಂಭ್ರಮದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಬಹುಮಾನ ಪಡೆದುಕೊಂಡಿದೆ.

ಹಾಡುಗಾರಿಕೆಯಲ್ಲಿ ಸುಮಿ ಸುಬ್ಬಯ್ಯ ಪ್ರಥಮ ಬಹುಮಾನ ಪಡೆದರು. ಆನ್ಸ್ ಹಾಡುಗಾರಿಕೆಯಲ್ಲಿ ವಿದ್ಯಾ ನಾರಾಯಣ್ ಪ್ರಥಮ, ನಂದಿನಿ ದ್ವಿತೀಯ, ಸೋಲೋ ನೃತ್ಯದಲ್ಲಿ ಮಹಿತ್ ಪೂಣಚ್ಚ ಪ್ರಥಮ, ಗುಂಪು ಹಾಡುಗಾರಿಕೆಯಲ್ಲಿ ಪ್ರಥಮ, ಸ್ಕಿಟ್‍ನಲ್ಲಿ ಪ್ರಥಮ, ಮೈಮ್‍ನಲ್ಲಿ ದ್ವಿತೀಯ ಸ್ಥಾನ ಪಡೆದರು.

ವಿವಿಧ ಪೈಪೋಟಿಯಲ್ಲಿ ನಂದಿನಿ, ಸುಭಾಷಿಣಿ, ರಿಸ್ತಾ ಚೆಂಗಪ್ಪ, ಮಮತಾ, ಸುಪ್ರಿತಾ, ವಿಜಯ್, ದಿಲನ್ ಚೆಂಗಪ್ಪ, ಡಾ. ಆಶಿಕ್ ಚೆಂಗಪ್ಪ, ನಾರಾಯಣ್, ಡಾ. ರಾಮಕೃಷ್ಣ, ಹೆಗ್ಡೆ, ವಿದ್ಯಾ, ಬೀಟಾ, ವರುಣ್, ಮಂಜು, ಪ್ರಸಾದ್, ಸಹಿತ್, ಪ್ರಖ್ಯಾತ್, ಮಂಜು ಪ್ರಸಾದ್, ಹರ್ಷವರ್ಧನ್ ಪಾಲ್ಗೊಂಡಿದ್ದರು.