ಗೋಣಿಕೊಪ್ಪ ವರದಿ, ನ. 22: ಬಿರುನಾಣಿ ಸುಜ್ಯೋತಿ ಶಾಲೆಯಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಆಯೋಜಿಸಿದ್ದ ಮಕ್ಕಳ ಹಾಗೂ ವೃದ್ಧರ ವಿಶೇಷ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುಮಾರು 120 ಮಕ್ಕಳು ತಪಾಸಣೆ ಮಾಡಿಸಿಕೊಂಡರು.

ವೀರಾಜಪೇಟೆ ದಂತ ಮಹಾವಿದ್ಯಾಲಯದ ವೈದ್ಯರು ದಂತ ತಪಾಸಣೆ ನಡೆಸಿ ಸಲಹೆ ನೀಡಿದರು. ಮೈಸೂರು ಅಪೊಲೋ ಆಸ್ಪತ್ರೆಯ ವೈದ್ಯರ ತಂಡ ಮಕ್ಕಳ ಹಾಗೂ ವೃದ್ಧರ ವೈದ್ಯಕೀಯ ತಪಾಸಣೆ ನಡೆಸಿದರು. ಬಿರುನಾಣಿ ಸುತ್ತಲಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಶ್ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.