ಸೋಮವಾರಪೇಟೆ, ನ. 22: ಇಲ್ಲಿನ ಜೇಸಿ ಸಂಸ್ಥೆಯ 2018ರ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

4 ರಿಂದ 7 ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಂಜಮ್ಮ ಸಮುದಾಯ ಭವನದಲ್ಲಿ ಜಾನಪದ ಲೋಕದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಬರವಣಿಗೆ ಸ್ಪರ್ಧೆ ನಡೆಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಆಯೋಜಿಸಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ಪದಾಧಿಕಾರಿಗಳಾದ ನಾಗರಾಜು, ಸುಬ್ರಮಣಿ, ಜಯೇಶ್, ಮನೋಹರ್ ಅವರುಗಳು ಕಾರ್ಯಕ್ರಮ ನಡೆಸಿಕೊಟ್ಟರು. ತೀರ್ಪುಗಾರರಾಗಿ ಕೃಷಿ ಇಲಾಖೆಯ ಪಲ್ಲವಿ ಹಾಗೂ ಪೂಜಾ ಕಾರ್ಯನಿರ್ವಹಿಸಿದರು.