*ಗೋಣಿಕೊಪ್ಪಲು, ನ. 22: ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಈಚೆಗೆ ನಡೆದ ಕೊಡಗು ಯುವಜನೋತ್ಸವದಲ್ಲಿ ಅಮ್ಮತ್ತಿ ಬಿಳುಗುಂದ ಗ್ರಾಮದ ಕಾವ್ಯಶ್ರೀ ಭರತ ನಾಟ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕಾವ್ಯಶ್ರೀ ನಾಟ್ಯಾಂಜಲಿ ನೃತ್ಯ ಶಾಲೆಯ ನಿರ್ದೇಶಕ ಎಂ.ಪಿ. ಕಾಂತರಾಜ್ ಹಾಗೂ ಅಮ್ಮತ್ತಿ ನೇತಾಜಿ ಶಾಲೆಯ ಶಿಕ್ಷಕಿ ಎಂ.ಎನ್. ಹೇಮಾವತಿ ಅವರ ಮಗಳಾಗಿದ್ದಾಳೆ. ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್‍ಸಿ. ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.