ಗೋಣಿಕೊಪ್ಪ ವರದಿ, ನ. 21: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಪ್ರೌಢ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಲಯನ್ಸ್ ಶಾಲಾ ತಂಡವು ಒಂದೇ ದಿನ ಎರಡು ಗೆಲವು ದಾಖಲಿಸಿತು. ಪ್ರತ್ಯೇಕ ತಂಡಗಳಾದ ಎಸ್‍ಎಂಎಸ್ ಹಾಗೂ ಪ್ರಗತಿ ವಿರುದ್ಧ ಎರಡು ಗೆಲವು ದಾಖಲಿಸಿ ಮಿಂಚು ಹರಿಸಿತು.
ಗೋಣಿಕೊಪ್ಪ ಲಯನ್ಸ್ ತಂಡವು ಎಸ್‍ಎಂಎಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು. ಲಯನ್ಸ್ ಪರವಾಗಿ 1ನೇ ನಿಮಿಷದಲ್ಲಿ ಧನುಶ್, 18 ರಲ್ಲಿ ಸಪನ್ ತಲಾ ಒಂದೊಂದು ಗೋಲು ಹೊಡೆದರು.
ಗೋಣಿಕೊಪ್ಪ ಲಯನ್ಸ್ ತಂಡವು ಪ್ರಗತಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಪಡೆಯಿತು. ಲಯನ್ಸ್ ಪರ 3 ರಲ್ಲಿ ದಿವಾನ್, 10 ರಲ್ಲಿ ಸಪನ್, 18 ರಲ್ಲಿ ಧನುಶ್ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು.
ಪೊನ್ನಂಪೇಟೆ ಸರ್ಕಾರಿ ಶಾಲೆ ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಪೊನ್ನಂಪೇಟೆ ಪರ 6 ಹಾಗೂ 10ನೇ ನಿಮಿಷದಲ್ಲಿ ನಾಚಪ್ಪ, ಸೆಂಟ್ ಆನ್ಸ್ ಪರ 11 ರಲ್ಲಿ ದೇವಯ್ಯ ಗೋಲು ಹೊಡೆದರು.
ಕಾಪ್ಸ್ ತಂಡವು ಕೊಡಗು ವಿದ್ಯಾಲಯ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿತು. ಕಾಪ್ಸ್ ಪರ 2ನೇ ನಿಮಿಷದಲ್ಲಿ ಲೆನ್ ಚೆಂಗಪ್ಪ, 20 ರಲ್ಲಿ ಪ್ರಣವ್, 29 ರಲ್ಲಿ ತಶಿನ್ ತಲಾ ಒಂದೊಂದು ಗೋಲು ಬಾರಿಸಿದರು.
ಸೆಂಟ್ ಆಂಥೋನಿ ತಂಡವು ಕಾಲ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಆಂಥೋನಿ ಪರ 10 ಹಾಗೂ 17 ನೇ ನಿಮಿಷಗಳಲ್ಲಿ ಬಿಪಿನ್, 16 ರಲ್ಲಿ ವಚನ್, 24 ರಲ್ಲಿ ಆರ್ಯನ್, ಕಾಲ್ಸ್ ಪರ 1 ನೇ ನಿಮಿಷದಲ್ಲಿ ಶ್ರವಣ್, 6 ರಲ್ಲಿ ತಶ್ವಿನ್ ಗೋಲು ಹೊಡೆದರು.