ಮಡಿಕೇರಿ, ನ. 21: ತಾ. 14 ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೊನ್ನಂಪೇಟೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮ ಕಾಫಿ ಮಂಡಳಿ ವಿಸ್ತರಣಾ ವಿಭಾಗ ಗೋಣಿಕೊಪ್ಪದ ಸಹಯೋಗದೊಂದಿಗೆ ನಡೆಯಿತು. ಕಾಫಿ ಮಂಡಳಿ ಹಿರಿಯ ವಿಸ್ತರಣಾಧಿಕಾರಿ ಡಾ. ವಿ. ಚಂದ್ರಶೇಖರ್, ಬಾಲನ್, ಸಿಬ್ಬಂದಿ ಆಗಮಿಸಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ವಚ್ಛತಾ ಜಾಥಾ ನಡೆಸಿದರು. ವಿದ್ಯಾರ್ಥಿಗಳಿಂದ ಚಿತ್ರಕಲೆ ನಡೆಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಎಂ.ಪಿ. ಸೋಮಯ್ಯ, ರಶ್ಮಿ, ಭಾನುಪ್ರಕಾಶ್, ರೈತರ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಕಾಲೇಜು ಪೊನ್ನಂಪೇಟೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ, ಸಿಹಿ ಹಂಚಿದರು. ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಪೋಷಕರು ಭಾಗವಹಿಸಿದ್ದರು.