ಸೋಮವಾರಪೇಟೆ, ನ. 21: ಪ್ರಕೃತಿ ವಿಕೋಪ ಸಂತ್ರಸ್ತರ ಬದುಕಿಗೆ ಚೈತನ್ಯ-ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ, ಜೇಸಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆಯಲ್ಲಿ ಮಕ್ಕಳ ಮ್ಯಾರಥಾನ್ ನಡೆಯಿತು.

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಗೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಪಟ್ಟಣದ ಜೇಸಿ ವೇದಿಕೆ ಎದುರು ಚಾಲನೆ ನೀಡಿದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಮಿತ್ (ಪ್ರ), ಮಿತೇಶ್ (ದ್ವಿ) ಹಾಗೂ ಮಡಿಕೇರಿಯ ಕ್ರೀಡಾ ಶಾಲೆಯ ದೀಕ್ಷಿತ್ (ತೃ) ಸ್ಥಾನಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಪ್ರತೀಕ್ಷ (ಪ್ರ), ಜ್ಞಾನ ವಿಕಾಸ ಶಾಲೆಯ ದುರ್ಗಶ್ರೀ ಹಾಗೂ ಕೆ.ಟಿ. ಪ್ರಿಯಾಂಕ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಕೂಡಿಗೆ ಸ್ಪೋಟ್ರ್ಸ್ ಸ್ಕೂಲ್‍ನ ಧನುಷ್ (ಪ್ರ), ಜ್ಞಾನ ವಿಕಾಸ ಶಾಲೆಯ ಶ್ರೇಯಸ್ (ದ್ವಿ) ಮತ್ತು ಸಂತ ಜೋಸೆಫರ ಶಾಲೆಯ ಅಂಕಿತ್ (ತೃ) ಸ್ಥಾನಗಳಿಸಿದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆಯ ಕೀರ್ತನ(ಪ್ರ), ಆಲೂರುಸಿದ್ದಾಪುರದ ಮೊರಾರ್ಜಿ ಶಾಲೆಯ ಸಿಂಧು (ದ್ವಿ) ಹಾಗೂ ಕುವೆಂಪು ವಿದ್ಯಾ ಸಂಸ್ಥೆಯ ದೀಕ್ಷ (ತೃ) ಸ್ಥಾನಗಳಿಸಿದರು.

ನಂತರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 4 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನಿಧಾನವಾಗಿ ಸೈಕಲ್ ಚಾಲಿಸುವ ಸ್ಪರ್ಧೆ, ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಾಲಿಸುವ ಸ್ಪರ್ಧೆ ನಡೆಯಿತು. ಸಂಜೆ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ವಿಜಯಪುರ ಜೇಸಿ ಸಂಸ್ಥೆಯ ಅಧ್ಯಕ್ಷ ಎಸ್.ಎ. ನಾಗೇಶ್ ಮತ್ತು ಸೋಮವಾರಪೇಟೆ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎ. ಮುರುಳೀಧರ್ ನೇತೃತ್ವದಲ್ಲಿ ಗಾನಸುಧಾ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ಜೇಸಿರೇಟ್ ಅಧ್ಯಕ್ಷೆ ಮಾಯಾ ಗಿರೀಶ್, ಮನೋಹರ್ ಮತ್ತಿತರರು ಕಾರ್ಯಕ್ರಮ ನಿರ್ವಹಿಸಿದರು.