ಚೆಟ್ಟಳ್ಳಿ, ನ. 20: ಸಮೀಪದ ಕಂಡಕರೆಯ ಬ್ರೈಟ್ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ವತಿಯಿಂದ ನಡೆದ ಹೊನಲು ಬೆಳಕಿನ ಶಟಲ್ ಪಂದ್ಯಾವಳಿಯಲ್ಲಿ ಇರ್ಷಾದ್ ಹಾಗೂ ಹರ್ಷಾದ್, ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನವನ್ನು ನೀಲ್ ಬೋಬಿ ಹಾಗೂ ಸಿದ್ದಾರ್ಥ್ ಪಡೆದುಕೊಂಡರು.
ಪಂದ್ಯಾವಳಿಯಲ್ಲಿ 30 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಮೊದಲನೇ ಸೆಮಿಫೈನಲ್ ಪಂದ್ಯವು ಇರ್ಷಾದ್ ಹಾಗೂ ಕುಶಾಲನಗರ ತಂಡಗಳ ನಡುವೆ ನಡೆಯಿತು. ಇರ್ಷಾದ್ ತಂಡವು 2-0 ಸೆಟ್ ಗಳಿಂದ ವಿಜಯಗಳಿಸಿ ಫೈನಲ್ ಪ್ರವೇಶಿಸಿದರು.ದ್ವಿತೀಯ ಸೆಮಿಫೈನಲ್ ಪಂದ್ಯವು ನೀಲ್ ಬೋಬಿ ತಂಡ ಹಾಗೂ ಅಣ್ಣಯ್ಯ ತಂಡಗಳ ನಡುವೆ ನಡೆಯಿತು. ನೀಲ್ ಬೋಬಿ ತಂಡವು 2-0 ಸೆಟ್ ಗಳಿಂದ ವಿಜಯಗಳಿಸಿ ಫೈನಲ್ ಪ್ರವೇಶಿಸಿದರು.
ನೀಲ್ ಬೋಬಿ ತಂಡವನ್ನು, ಇರ್ಷಾದ್ ತಂಡವು 21-20, 21-17 ಎರಡು ನೇರ ಸೆಟ್ ಗಳಿಂದ ಪರಾಜಯಗೊಳಿಸಿ ಪ್ರಥಮ ಸ್ಥಾನ ಪಡೆದರು, ನೀಲ್ ಬೋಬಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ಮನ್ಸೂರ್ ವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಆರಿಫ್, ಪ್ರಮುಖರಾದ ನೌಷಾದ್, ಉಪಾಧ್ಯಕ್ಷ ಸುಹೈಲ್, ಸೌಕತ್, ಲೋಕೇಶ್, ಫಾರೂಖ್ ಮತ್ತಿತ್ತರರು ಉಪಸ್ಥಿತರಿದ್ದರು. ಪಂದ್ಯಾಟದ ತೀರ್ಪುಗಾರರಾಗಿ, ಸೌಕತ್, ಅಣ್ಣಯ್ಯ, ಲೋಕೇಶ್, ಹರ್ಷಾದ್ ಹಾಗೂ ಸ್ಕೋರ್ ಬೋರ್ಡ್ ಪ್ರಮುಖರಾಗಿ ಫಾರೂಖ್ ಕಾರ್ಯನಿರ್ವಹಿಸಿ, ಸೌಕತ್ ಸ್ವಾಗತಿಸಿ, ಲೋಕೇಶ್ ವಂದಿಸಿದರು.