ಶನಿವಾರಸಂತೆ, ನ. 20: ಕೊಡ್ಲಿಪೇಟೆ ಪದವಿ ಪೂರ್ವ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಗಳಾದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಖ್ಯಾತಿ ವಿಶ್ವಾಸ್ ಛದ್ಮವೇಷ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕವನ ವಾಸು ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಬ್ಬರು ಕೊಡ್ಲಿಪೇಟೆ ಹೋಬಳಿಯ ಖ್ಯಾತೆ ಗ್ರಾಮದ ನಿವಾಸಿಗಳಾದ ಕಲಾವಿದ ವಾಸು ಹಾಗೂ ಕಮಲ ದಂಪತಿಯ ಮಕ್ಕಳಾಗಿದ್ದಾರೆ.