ಮಡಿಕೇರಿ, ನ. 21 : ಪೊನ್ನಂಪೇಟೆಯಲ್ಲಿ ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಾಟ್ಯಾಲಯದ ಕೆ.ಟಿ. ರಾಜೇಶ್ ಆಚಾರ್ಯ ಅವರ ವಿದ್ಯಾರ್ಥಿಗಳಾದ ನಮಿತಾ ಶೆಣೈ ಬಿ.ಎಂ., ಕೂಚುಪುಡಿ ಹಾಗೂ ಒಡಿಸ್ಸಿ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಕಥಕ್ ವಿಭಾಗದಲ್ಲಿ ಗಾನವಿ ರಮೇಶ್ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಗನ್ಮೋಹನ ನಾಟ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತುಮಕೂರಿನಲ್ಲಿ ತಾ. 30ರಿಂದ ಡಿಸೆಂಬರ್ 2 ರವರೆಗೆ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದೆ.

ನಮಿತಾ ಶೆಣೈ ವೀರಾಜಪೇಟೆಯ ಬಿ.ಎನ್. ಮನುಶೆಣೈ ಹಾಗೂ ಸುಮಾ ಶೆಣೈ ದಂಪತಿಗಳ ಪುತ್ರಿಯಾಗಿದ್ದು, ಸೆಂಟ್ ಏನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಳೆ.

ಗಾನವಿ ರಮೇಶ್ ವೀರಾಜಪೇಟೆಯ ಪುಷ್ಪ ಹಾಗೂ ದಿ| ರಮೇಶ್ ಅವರ ಪುತ್ರಿಯಾಗಿದ್ದು, ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದಾರೆ.