ಗೋಣಿಕೊಪ್ಪ ವರದಿ, ನ. 21: ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಕಲಾ ಪ್ರದರ್ಶನ ಮಾಡುವ ಮೂಲಕ ಯುವಜನ ಉತ್ಸವದಲ್ಲಿ ಸಂಭ್ರಮಿಸಿದರು. ಉತ್ಸವದಲ್ಲಿ ಕಳೆದ ವರ್ಷಕಿಂತ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ವಿಶೇಷತೆಯಾಗಿತ್ತು.

ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ, ಜಿಲ್ಲಾ ಹಾಗೂ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೊಡಗು ಯುವಜನ ಉತ್ಸವದಲ್ಲಿ ನೂರಾರು ಕಲಾವಿದರು ಹೆಜ್ಜೆ ಹಾಕಿ ಕಲೆ ಅನಾವಣಗೊಳಿಸಿದರು.

ನಾಟಕ, ಶಾಸ್ತ್ರೀಯ ಗಾಯನ, ತಬಲ, ವೀಣೆ, ಮೃದಂಗ, ಹಾರ್ಮೋನಿಯಮ್, ಗಿಟಾರ್ ಮಣಿಪುರಿ, ಒಡಿಸ್ಸಿ, ಕಥಕ್, ಕೂಚುಪುಡಿ, ಭರತ ನಾಟ್ಯ ಪ್ರದರ್ಶನಗೊಡವು. ಜಾನಪದ ನೃತ್ಯ, ಜಾನಪದ ಗೀತೆ, ಆಶುಭಾಷಣ ಗಮನ ಸೆಳೆದವು. ಸಂಜೆ 7 ಗಂಟೆವರೆಗೂ ಸ್ಪರ್ಧೆಗಳು ನಡೆದು ಯುವ ಜನೋತ್ಸವಕ್ಕೆ ಮೆರುಗು ತಂದಿತು.

ಫಲಿತಾಂಶ: ಜಾನಪದ ನೃತ್ಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ (ಪ್ರ), ಪೊನ್ನಂಪೇಟೆ ಶಾಫಿಯಾ ತಂಡ (ದ್ವಿ), ಪೊನ್ನಂಪೇಟೆ ಜೈಭೀಮ್ ಯುವಕ ಸಂಘ (ತೃ), ಜಾನಪದ ಗೀತೆಯಲ್ಲಿ ಪೊನ್ನಂಪೇಟೆ ಜೈಭೀಮ್ ಯುವಕ ಸಂಘ (ಪ್ರ), ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ (ದ್ವಿ), ಹಳ್ಳಿಗಟ್ಟು ಸಿಐಟಿ ತಂಡ (ತೃ), ಏಕಾಂಕ ನಾಟಕ ಅರ್ವತೋಕ್ಲು ಸರ್ವಧೈವತಾ (ಪ್ರ).

ಶಾಸ್ತ್ರೀಯ ಗಾಯನದಲ್ಲಿ ಎಂ. ಡಿ. ಆರ್ಯನ್ (ಪ್ರ), ಚಿರಾಗ್ ಶರ್ಮ (ದ್ವಿ), ಕುಶಾಲ್ ಹಿರೇಶ್ (ತೃ), ಶಾಸ್ತ್ರೀಯ ವಾದನ ಮೃದಂಗದಲ್ಲಿ ಚಂದನ್ ನೆಲ್ಲಿತ್ತಾಯ (ಪ್ರ), ತಬಲದಲ್ಲಿ ಎಸ್. ಟಿ. ಗಿರೀಶ್ (ದ್ವಿ), ಹಾರ್ಮೋನಿಯಂ ವಿಭಾಗದಲ್ಲಿ ಪ್ರಜ್ವಲ್ (ಪ್ರ), ಶರತ್‍ಕುಮಾರ್ (ದ್ವಿ), ಗಿರೀಶ್ (ತೃ), ಗಿಟಾರ್‍ನಲ್ಲಿ ಸಿದ್ದಾರ್ಥ್ (ಪ್ರ), ದೀಕ್ಷಿತ್ ನೆಲ್ಲಿತ್ತಾಯ (ದ್ವಿ), ಶಾಸ್ತ್ರೀಯ ನೃತ್ಯ ಒಡಿಸ್ಸಿ ವಿಭಾಗದಲ್ಲಿ ಬಿ. ಎಂ. ನಮಿತಾ ಶೆಣೈ, (ಪ್ರ), ಕಥಕ್‍ನಲ್ಲಿ ಗಾಹ್ನವಿ (ಪ್ರ), ಕೂಚುಪುಡಿಯಲ್ಲಿ ಬಿ. ಎಂ. ನಮಿತಾ ಶೆಣೈ (ಪ್ರ), ಭರತನಾಟ್ಯದಲ್ಲಿ ಕಾವ್ಯಾಶ್ರೀ (ಪ್ರ), ತುಷಾಲಿ (ದ್ವಿ), ಹಾನವಿ (ತೃ), ಆಶುಭಾಷಣದಲ್ಲಿ ದರ್ಶನ್ ಪ್ರಥಮ, ರಾಜಿóಕ್ ರಶೀಧ್ (ದ್ವಿ), ಅಜಯ್ (ತೃ). ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಪ್ರಮೋದ್ ಗಣಪತಿ, ಕಾಫಿ ಬೆಳೆಗಾರ ಜಿಮ್ಮಿ ಅಣ್ಣಯ್ಯ, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮದೋಶ್ ಪೂವಯ್ಯ, ಪ್ರಮುಖರುಗಳಾದ ಸುಕುಮಾರ್, ಮಹೇಶ್ ಇದ್ದರು. ಸಮಾರೋಪದಲ್ಲಿ ಪೊನ್ನಂಪೇಟೆ ಗ್ರಾ. ಪಂ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ, ಜಿ.ಪಂ. ಸದಸ್ಯೆ ಶಾಜಿ ಅಚ್ಚುತ್ತನ್, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಕಾಲೇಜು ಆಡಳಿ ಮಂಡಳಿ ಅಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಯಪ್ಪ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಬಹುಮಾನ ವಿತರಿಸಿದರು. ಚಂದ್ರಶೇಖರ್, ಚಂದ್ರಯ್ಯ, ವಾಮನ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.