ಮಡಿಕೇರಿ, ನ. 21: ತಾಲೂಕಿನ ಬಿಳಿಗೇರಿಯ ಶ್ರೀ ಭಗವತಿ ಯುವಕ ಸಂಘ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಯುವ ಒಕ್ಕೂಟ, ನೆಹರು ಯುವ ಕೇಂದ್ರ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಿಳಿಗೇರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 42ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಆಟೋಟ ಸ್ಪರ್ಧೆಗಳಿಗೆ ಸಂಘದ ಅಧ್ಯಕ್ಷÀ ಮಂಡುವಂಡ ಟಾಟಾ ದೇವಯ್ಯ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು.

ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಮೇಕೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಕೆ. ಜಯಂತಿ ವಹಿಸಿದ್ದು, ಭಗವತಿ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಅತ್ಯುತ್ತಮ ಕ್ರೀಡಾಕೂಟವನ್ನು ಆಯೋಜಿಸಿದಕ್ಕಾಗಿ ಶ್ಲಾಘನೆ ವ್ಯಕ್ತಡಿಸಿದರು.

ಪಂಚಾಯಿತಿ ವತಿಯಿಂದ ಕ್ರೀಡಾಕೂಟಕ್ಕಾಗಿ 2,000 ರೂ.ಗಳ ಚೆಕ್‍ನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಮಂಡುವಂಡ ಜೋಯಪ್ಪ ಹಾಗೂ ಹಾಕತ್ತೂರಿನ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಮಂಞÉ್ಞೀರ ಸಾಬು ತಿಮ್ಮಯ್ಯ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ, ಸಂಘವು ಹಲವು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸು ವಂತಾಗಲಿ ಎಂದು ಹಾರೈಸಿದರು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಟಾಟಾ ದೇವಯ್ಯ, ದ್ವಿತೀಯ ಬಹುಮಾನವನ್ನು ಐರೀರ ಭರತ್, ತೃತೀಯ ಬಹುಮಾನವನ್ನು ಮಂಡುವಂಡ ದರ್ಶನ್ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ಭಾರದ ಗುಂಡು ಎಸೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪರ್ಲಕೋಟಿ ಕಿಶನ್, ದ್ವಿತೀಯ ಬಾಳಾಡಿ ಮನೋಜ್ ತಮ್ಮದಾಗಿಸಿ ಕೊಂಡರು.

ಮಹಿಳೆಯರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಪರ್ಲಕೋಟಿ ಪವಿ ಕುಶಾಲಪ್ಪ, ದ್ವಿತೀಯ ದಂಬೆಕೋಡಿ ರಾಣಿ ಮಾಚಯ್ಯ ಪಡೆದುಕೊಂಡರು.

ಮಹಿಳೆಯರಿಗೆ, ಹಿರಿಯ ಬಾಲಕ ಬಾಲಕಿಯರಿಗೆ, ಕಿರಿಯ ಬಾಲಕ ಬಾಲಕಿಯರಿಗೆ ಓಟದ ಸ್ಪರ್ಧೆ, ಸಣ್ಣ ಮಕ್ಕಳಿಗೆ ಕಾಳು ಹೆಕ್ಕುವದು, ಮಹಿಳೆಯರಿಗೆ ನಿಂಬೆ ಚಮಚ ಓಟದ ಸ್ಪರ್ಧೆ ಸೇರಿದಂತೆ 14 ಮಾದರಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಭಗವತಿ ಯುವಕ ಸಂಘದ ಕಾರ್ಯದರ್ಶಿ ಪ್ರಸಾದ್ ಬಿ.ಎನ್., ಖಜಾಂಚಿ ರೇಣುಕುಮಾರ್, ಮೇಕೇರಿ ಗ್ರಾ.ಪಂ. ಸದಸ್ಯರಾದ ವಾಣಿ ಚರ್ಮಣ, ಪುಪ್ಪು ನಾಣಯ್ಯ ಸೇರಿದಂತೆ ಭಗವತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.