ಗೋಣಿಕೊಪ್ಪ ವರದಿ, ನ. 20: ಪೆÇನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ಆರಂಭಗೊಂಡಿ ರುವ ಕೋದಂಡ ಎ. ಪೂವಯ್ಯ ಮೆಮೋರಿಯಲ್ ಪ್ರೌಢಶಾಲಾ ಬಾಲಕ, ಬಾಲಕಿಯರ ಹಾಕಿ ಟೂರ್ನಿ ಯಲ್ಲಿ 6 ತಂಡಗಳು ಜಯಗಳಿಸಿವೆ.
ಬಾಲಕರಲ್ಲಿ ವೀರಾಜಪೇಟೆ ಸೆಂಟ್ ಆನ್ಸ್, ಪೆÇನ್ನಂಪೇಟೆ ಸೆಂಟ್ ಆಂಥೋನಿ, ಕೊಡಗು ವಿದ್ಯಾಲಯ, ಪ್ರಗತಿ, ಬಾಲಕಿಯರಲ್ಲಿ ಕೊಡಗು ವಿದ್ಯಾಲಯ ತಂಡಗಳು ಜಯ ಗಳಿಸಿದವು.
ಬಾಲಕರ ವಿಭಾಗದಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡವು ಶ್ರೀರಾಮ ಟ್ರಸ್ಟ್ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಆನ್ಸ್ ಪರ 13ನೇ ನಿಮಿಷದಲ್ಲಿ ಹೇಮಂತ್, 14 ರಲ್ಲಿ ಸಾತ್ವಿಕ್, 16 ರಲ್ಲಿ ಸುಬ್ರಮಣಿ, 31 ರಲ್ಲಿ ದೇಶ್ ಗೋಲು ಹೊಡೆದರು.
ಪೆÇನ್ನಂಪೇಟೆ ಸೆಂಟ್ ಆಂಥೋನಿ ತಂಡವು ಅಮ್ಮತ್ತಿ ಪ್ರೌಢಶಾಲಾ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಪೆÇನ್ನಂಪೇಟೆ ಪರ 3ಕ್ಕೆ ಗೌರವ್, 4ಕ್ಕೆ ಬಿಪಿನ್, 5ಕ್ಕೆ ಆರ್ಯನ್, 23ಕ್ಕೆ ತಿಮ್ಮಯ್ಯ ಗೋಲು ಹೊಡೆದರು.
ಭಾರತೀಯ ಕೊಡಗು ವಿದ್ಯಾಲಯ ತಂಡವು ರೋಟರಿ ತಂಡದ ವಿರುದ್ಧ 7-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ವಿದ್ಯಾಲಯ ಪರ 4, 6, 21ನೇ ನಿಮಿಷಗಳಲ್ಲಿ ಶಶಾಂಕ್, 5, 23, 24ರಲ್ಲಿ ದಿವಿನ್, 17ಕ್ಕೆ ನಿತಿನ್ ಗೋಲು ಹೊಡೆದರು.
ಸೆಂಟ್ ಆಂಥೋನಿ ತಂಡವು ಅಂಕುರ್ ತಂಡವನ್ನು 6-0 ಗೋಲು ಗಳಿಂದ ಸೋಲಿಸಿತು. ಆಂಥೋನಿ ಪರ 1, 9, 18ಕ್ಕೆ ದಿವಿನ್, 18, 21 ಕ್ಕೆ ಬಿಪಿನ್, 1ಕ್ಕೆ ಆರ್ಯನ್ ಗೋಲು ಬಾರಿಸಿದರು.
ಬಾಲಕಿಯರಲ್ಲಿ ಭಾರತೀಯ ಕೊಡಗು ವಿದ್ಯಾಲಯ ತಂಡ ಕಾಲ್ಸ್ ವಿರುದ್ಧ 3-0 ಗೋಲುಗಳಿಂದ ಮಣಿಸಿತು. ಕೊಡಗು ಪರ 6ಕ್ಕೆ ಅದ್ವಿಕಾ, ಸುನೈನಾ, 15ಕ್ಕೆ ತೇಜಸ್ವಿ ಗೋಲು ಹೊಡೆದರು.
ಪ್ರಗತಿ ತಂಡವು ರೂಟ್ಸ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯ ಪಡೆಯಿತು. ಪ್ರಗತಿ ಪರ 6ಕ್ಕೆ ಅಸೆಲ್, 28ಕ್ಕೆ ಅಖಿಲೇಶ್ ಗೋಲು ಗಳಿಸಿದರು.