1991ರಲ್ಲಿ ಅರಣ್ಯ ಇಲಾಖೆಯ ಸೆಕ್ಷನ್ 4ರ ಪ್ರಕಾರ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ ಇರುವ 230.07 ಎಕರೆ ಭೂಮಿಯು ಮೀಸಲು ಅರಣ್ಯಕ್ಕೆ ಸೇರಿರುವ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿದೆ. ಈ ಜಾಗದ ಮೇಲೆ ಯಾರಿಗೂ ಅಧಿಕಾರ ಇರುವದಿಲ್ಲ. ಕೊಂಗಣ ಭಾಗದ ಸರ್ವೆ ನಂ 161ರಲ್ಲಿ 7.98, ಎಕ್ರೆ, 162ರಲ್ಲಿ 158.06 ಎಕ್ರೆ ಜಾಗವು ಮೀಸಲು ಅರಣ್ಯಕ್ಕೆ ಸೇರಿದೆ. ಇಲಾಖೆಯ ನಿಯಮ ಪ್ರಕಾರ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಲಾಖೆಯ ನಿಯಮಗಳನ್ನು ಪಾಲಿಸುವದು ನಮ್ಮ ಕರ್ತವ್ಯ.

ಮರಿಯಾ ಕೃಸ್ತರಾಜ್, ಅರಣ್ಯ ಸಂರಕ್ಷಣಾಧಿಕಾರಿಗಳು, ವೀರಾಜಪೇಟೆ

ಜಿಲ್ಲೆಯ ರೈತರನ್ನು, ಕಾಫಿ ಬೆಳೆಗಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ಅರಣ್ಯ ಇಲಾಖೆ ಕಿರುಕುಳ ನೀಡುತ್ತ ಬರುತ್ತಿದೆ. ಇದೀಗ ಕಾಫಿ ಬೆಳೆಗಾರನ ಬದುಕಿಗೆ ಸಂಚಕಾರ ಬಂದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ತನ್ನ ಸ್ವಾಧೀನದಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಬಂದಿರುವ ಬೆಳೆಗಾರರ ಇರುವ ಅಲ್ಪ ಸ್ವಲ್ಪ ಭೂಮಿಯನ್ನು ತೆರವುಗೊಳಿಸುವ ಹುನ್ನಾರ ನಡೆಯುತ್ತಿದೆ. ಕೇವಲ ಅರಣ್ಯ ಇಲಾಖೆಯ ನಿಯಮಗಳನ್ನು ಬೆಳೆಗಾರರ ಮೇಲೆ ಹೇರುವ ಮೂಲಕ ಗಧ ಪ್ರಹಾರ ಮಾಡುತ್ತಿದ್ದಾರೆ. ಕೂಡಲೇ ನೊಂದ ಕಾಫಿ ಬೆಳೆಗಾರರ ತಂಡದೊಂದಿಗೆ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿ ನೈಜ್ಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡುತ್ತೇನೆ.

-ಸಂಕೇತ್ ಪೂವಯ್ಯ, ಜಿಲ್ಲಾಧ್ಯಕ್ಷರು, ಜೆಡಿಎಸ್

ಹೈಸೊಡ್ಲೊರು ಸರ್ವೆ ನಂ.1/1ರಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ 279 ಏಕ್ರೆ ಜಾಗವನ್ನು 24.04.2007ರಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ 224/07.08 ಸರ್ಕಾರಕ್ಕೆ ಹಸ್ತಾಂತರಗೊಳಿಸಲಾಗಿದೆ. ಈ ಜಾಗದಲ್ಲಿ ಇತ್ತೀಚೆಗೆ ಎಂ.ಎ. ರಮೇಶ್ ಅವರಿಗೆ 4 ಎಕ್ರೆ ಭೂಮಿಯನ್ನು ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಕೊಡಲಾಗಿದೆ. ಇನ್ನುಳಿದಂತೆ ಇರುವ ಜಾಗದಲ್ಲಿ ಅನೇಕ ಕುಟುಂಬಗಳು ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಅರಣ್ಯ ಇಲಾಖೆಯು ಇದು ಮೀಸಲು ಅರಣ್ಯ ಪ್ರದೇಶವೆಂದು ಹೇಳುತ್ತ ರೈತರಿಗೆ ಕಿರುಕುಳ ನೀಡಲು ಮುಂದಾಗಿದೆ.

-ಚಂಗುಲಂಡ ಸೂರಜ್, ಗ್ರಾಮಸ್ಥರು

ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಇದೀಗ ಅರಣ್ಯ ಇಲಾಖೆಯು ನೀಡಿರುವ ನೋಟಿಸಿನಿಂದ ದಿಕ್ಕೇ ತೋಚದಂತಾಗಿದೆ. ಕಷ್ಟದ ಸಮಯದಲ್ಲಿ ಸಂಕೇತ್ ಪೂವಯ್ಯನವರು ಸಹಾಯಕ್ಕೆ ಬಂದಿದ್ದಾರೆ. ಸದ್ಯದಲ್ಲಿಯೇ ಬೆಂಗಳೂರಿನಲ್ಲಿರುವ ಹಿರಿಯ ಅರಣ್ಯಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ

-ಕಳ್ಳಂಗಡ ಸುರೇಶ್, ನೊಂದ ಕಾಫಿ ಬೆಳೆಗಾರ