ಮಡಿಕೇರಿ, ನ. 20: ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನವನ್ನು ಜಿಲ್ಲೆಯ ಮುಸಲ್ಮಾನ ಬಾಂಧವರು ಸಂಭ್ರಮ, ಸಡಗರ, ಶ್ರದ್ಧಾಭಕ್ತಿಯೊಂದಿಗೆ ಆಚರಿಸಿದರು. ಈದ್ ಮಿಲಾದ್ ಎಂದು ಕರೆಯಲ್ಪಡುವ ಪ್ರವಾದಿ ಜಯಂತಿಯ ಪ್ರಯುಕ್ತ ಜಿಲ್ಲೆಯ ಮದ್ರಸಗಳಲ್ಲೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದವು. ಪ್ರವಾದಿ ಕೀರ್ತನೆ, ಭಾಷಣ, ಸಂಭಾಷಣೆ, ದಫ್ ಪ್ರದರ್ಶನ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಹಬ್ಬ ಆಚರಿಸಲ್ಪಟ್ಟಿತು.ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ವಿವಿಧ ಭಾಷೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಎಲ್ಲೆಡೆ ಮೆರವಣಿಗೆ, ಪ್ರವಾದಿ ಗುಣಗಾನಗಳು ಜರುಗಿದವು. ಅನೇಕ ಕಡೆಗಳಲ್ಲಿ ಗಣ್ಯರು ಪ್ರವಾದಿಯ ಸಂದೇಶದ ಕುರಿತು ಮಾತನಾಡಿದರು. ಮಸೀದಿಗಳಲ್ಲಿ ವಿಶೇಷ ಮೌಲೂದ್ ಪಾರಾಯಣ ನಡೆಯಿತು.ಈ ಬಾರಿ ಜಿಲ್ಲಾ ಕೇಂದ್ರ ಮಡಿಕೇರಿ ಹೊರತು ಪಡಿಸಿ ಇನ್ನಿತರ ಕಡೆಗಳಲ್ಲಿ ಈದ್ ಮಿಲಾದ್ ಸಮಾರಂಭ ಇಂದು ನಡೆಯಿತು. ಮಡಿಕೇರಿಯಲ್ಲಿ ಜನಾಂಗ ಬಾಂಧವರು ತಾ. 21 ರಂದು (ಇಂದು) ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಿರುವದರಿಂದ ಮಡಿಕೇರಿಯಲ್ಲಿ ಈ ದಿನ ಕಾರ್ಯಕ್ರಮವಿರಲಿಲ್ಲ. ಆದರೆ ಜಿಲ್ಲೆಯ ಇನ್ನಿತರ ಭಾಗಗಳಲ್ಲಿ ತಾ. 20 ರಂದು ಎಲ್ಲಾ ಮಸೀದಿಗಳನ್ನು ಮದ್ರಸಗಳನ್ನು ಅಲಂಕರಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಅನ್ನ ಸಂತರ್ಪಣೆಯೂ ಜರುಗಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭ ಹಿರಿಯರು, ಕಿರಿಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ನಾಪೆÇೀಕ್ಲು: ವಿಶ್ವದಲ್ಲಿಯೇ ಶಾಂತಿ, ಸಾಮರಸ್ಯವನ್ನು ಸಾರಿದ ಮುಸ್ಲಿಂ ಧರ್ಮ ಗುರು ಪ್ರವಾದಿ ಮಹಮ್ಮದ್ ಅವರ ತತ್ವ ಸಿದ್ಧಾಂತಗಳನ್ನು ಮೊದಲು ಅರಿಯಬೇಕು ಎಂದು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಭಿಪ್ರಾಯಪಟ್ಟರು.
ಸಮೀಪದ ಹಳೇ ತಾಲೂಕು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ (ಮೊದಲ ಪುಟದಿಂದ) ನೆಲ್ಯ ಹುದಿಕೇರಿ ಪಟ್ಟಣವನ್ನು ಸಿಂಗಾರ ಗೊಳಿಸಲಾಗಿತ್ತು.
ಕೂಡಿಗೆ: ಮೊಯಿದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಈದ್-ಮಿಲಾದ್ ಕಾರ್ಯಕ್ರಮ ನಡೆಸಲಾಯಿತು. ಈದ್-ಮಿಲಾದ್ ಆಚರಣೆಯ ಅಂಗವಾಗಿ ಮಸೀದಿಯ ಆವರಣದಿಂದ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಕೂಡುಮಂಗಳೂರು ಡೈರಿ ಸರ್ಕಲ್‍ನವರೆಗೆ ಧಫ್ ಮತ್ತು ಸ್ಕೌಟ್ ಮಕ್ಕಳ ಮೇಳದೊಂದಿಗೆ ಮದರಸ ವಿದ್ಯಾರ್ಥಿಗಳು ಮತ್ತು ಜಮಾತ್ ಸದಸ್ಯರ ಮೆರವಣಿಗೆ ನಡೆಯಿತು.
ಸಮುದಾಯದ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡ ಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಟಿ.ಪಿ.ಅಮೀರ್ ಅಲಿ, ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಟಿ.ಪಿ. ಹಮೀದ್ ಸೇರಿದಂತೆ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಪೊನ್ನಂಪೇಟೆ: ವಿಶ್ವಗುರು ಪ್ರವಾದಿ ಮೊಹಮ್ಮದ್ ಪೈಂಗಂಬರರ ಜನ್ಮ ದಿನಾಚರಣೆಯನ್ನು ಪೊನ್ನಂಪೇಟೆ ಮಜ್ಲಿಸುನ್ನುರ್ ಹಾಗೂ ಮತಪ್ರವಚನ ಶಾಫಿ ಜುಮಾ ಮಸೀದಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆ 8.30 ಕ್ಕೆ ಶಾಫಿ ಮಸೀದಿಯ ಅಧ್ಯಕ್ಷ ಅಹ್ಮದ್ ಹಾಜಿರವರು ಧ್ವಜಾರೋಹಣವನ್ನು ನೆರವೇರಿಸಿದರು. ಬೆಳಗ್ಗೆ 9.30 ಗಂಟೆಗೆ ಮುಸ್ಲಿಂ ಬಾಂಧವರು ಮುಖ್ಯ ರಸ್ತೆಯಲ್ಲಿ ಪ್ರವಾದಿಯ ಧರ್ಮ ಸಂದೇಶಗಳೊಂದಿಗೆ ಮೆರವಣಿಗೆ ನಡೆಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖಾಸಿಂ ದಾರಿಮಿ ಮಾತನಾಡಿ, ಅಲ್ಲಾಹು ನಿಮ್ಮ ಶರೀರ ಹಾಗೂ ನಿಮ್ಮ ರೂಪವನ್ನು ನೋಡುವದಿಲ್ಲ. ನೋಡುವದು ಹೃದಯ ಶ್ರೀಮಂತಿಕೆಯನ್ನು ಮಾತ್ರ ನೀವು ಸತ್ಯಧರ್ಮದ ಕಡೆಗೆ ನಡೆಯಬೇಕೆಂದು ನುಡಿದರು.
ದಿನದ ಅಂಗವಾಗಿ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಭಾಷಣಾ ಪೈಪೋಟಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹನಫಿ ಮಸೀದಿಯ ಅಧ್ಯಕ್ಷರಾದ ಫಾಸೀಲ್, ಮೊಹಮ್ಮದ್ ಬಾಶ, ಗ್ರಾಮ ಪಂಚಾಯಿತಿ ಸದಸ್ಯರಾದ ಆಲಿರ ಹ್ಯಾರೀಸ್,ಆಲಿರ ರಶೀದ್, ಕಲ್ಲಾಯಿ ಜುಮಾ ಮಸೀದಿ ಯ ಸದಸ್ಯರುಗಳು, ಎಸ್‍ಕೆಎಸ್‍ಎಸ್ ಎಫ್‍ನ ಅಧ್ಯಕ್ಷ ಅಬ್ದುಲ್ ರಹೀಮ್ ಹಾಗೂ ಸದಸ್ಯರುಗಳು, ಮಿಲಾದುನ್ನಬಿ ಕಮಿಟಿಯ ಸದಸ್ಯರುಗಳು ಭಾಗವಹಿಸಿದ್ದರು.
ವೀರಾಜಪೇಟೆ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಚೆಟ್ಟಳ್ಳಿ: ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಹತ್ ವತಿಯಿಂದ ಪ್ರವಾದಿ ಪೈಗಂಬರ್
( ಸ) ಅವರ 1493 ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣವನ್ನು ಮಹಲ್ ಅಧ್ಯಕ್ಷ ಆಲಿ ಉಸ್ತಾದ್ ನೆರವೇರಿಸಿದರು. ಕಂಡಕರೆಯಿಂದ ಕಾಫಿಬೋರ್ಡ್‍ವರೆಗೆ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ , 1400 ವರ್ಷಗಳ ಹಿಂದೆ ಮಕ್ಕಾ ಮಣ್ಣಿನಲ್ಲಿ ಜನ್ಮತಾಳಿದ ಪ್ರವಾದಿ ಪೈಗಂಬರರು ಜಗತ್ತಿಗೆ ಸಾರಿದ ಶಾಂತಿ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅವಳವಡಿಸಬೇಕಾಗಿದೆ. ಪ್ರವಾದಿಯವರು ಕಲಿಸಿದ ಮಾರ್ಗದಲ್ಲಿ ನಾವು ನಮ್ಮ ಜೀವನವನ್ನು ನಡೆಸಬೇಕಾಗಿದೆ ಎಂದರು.
ಅನ್ವಾರ್ ವಿದ್ಯಾರ್ಥಿ ಬಿ.ಎಂ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ , ಇಸ್ಲಾಂ ಶಾಂತಿಯ ಸಂಕೇತವಾಗಿದೆ. ಭಯೋತ್ಪಾದನೆಯನ್ನು ಕಠೋರವಾಗಿ ವಿರೋಧಿಸುವ ಧರ್ಮವಾಗಿದೆ ಇಸ್ಲಾಂ. ಆದರೆ ಇಂದು ಜಗತ್ತಿನಲ್ಲಿ ಇಸ್ಲಾಂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸುವದು ಖೇದಕರ ವಿಷಯವಾಗಿದೆ ಎಂದರು.
ಪ್ರವಾದಿಯವರ ವಚನ ನಮಗೆ ಕಾಣಬಹುದು ಕೋಮುವಾದಕ್ಕೆ ಆಹ್ವಾನ ಮಾಡುವವನು, ಕೋಮುವಾದಕ್ಕೆ ಪ್ರಚೋದಿಸುವವನು ಇಸ್ಲಾಂ ಧರ್ಮದವನಲ್ಲ ಎಂದು ಪ್ರವಾದಿಯವರು ಕಲಿಸಿದ್ದಾರೆ ಎಂದರು.ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ದಫ್ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆಯಲ್ಲಿ ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಗ್ರಾಮ ಪಂಚಾಯತಿ ಸದಸ್ಯ ರಫಿ, ಚೆಟ್ಟಳ್ಳಿ ಮಹಲ್ ಕಾರ್ಯದರ್ಶಿ ಮೂಸಾ, ಈದ್ ಮೀಲಾದ್ ಕಮಿಟಿ ಪ್ರಮುಖ ರಜಾಕ್, ಆದಂ ಸಹದಿ, ಆರಿಫ್ ಸಖಾಫಿ, ಸುಲೈಮಾನ್ ಸಹದಿ ಇದ್ದರು.
ಸೋಮವಾರಪೇಟೆ: ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಸೋಮವಾರಪೇಟೆ ಭಾಗದ ಮುಸ್ಲಿಂ ಸಮುದಾಯ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು. ವಿವಿಧ ಮಸೀದಿಗಳಲ್ಲಿ ಈದ್‍ಮಿಲಾದ್ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆದವು.
ಕಲ್ಕಂದೂರಿನ ಮಯ್ಯದ್ದೀನ್ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಇದರೊಂದಿಗೆ ಜಮಾತ್‍ನ ಸದಸ್ಯರುಗಳಿಂದ ಕಲ್ಕಂದೂರಿನ ಮುಖ್ಯರಸ್ತೆಯಲ್ಲಿ ಜಾಥಾ ನಡೆಸಲಾಯಿತು. ಮಸೀದಿಯ ಖತೀಬರಾದ ಅಬ್ದುಲ್ ರಹ್ಮಾನ್ ಸಖಾಫಿ, ಸದರ್ ಮಹಲ್ಲಿಂ ಅಬ್ದುಲ್ ಬಷೀರ್, ಅಧ್ಯಕ್ಷರಾದ ಕೆ.ಎಂ. ಉಮ್ಮರ್, ಆಲಿ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್, ಜಮಾತ್ ಸದಸ್ಯರು, ಮದ್ರಸ ಮಕ್ಕಳು ಹಾಜರಿದ್ದರು.
ನಂತರ ಮದ್ರಸಾದ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು ನಡೆದವು. ಇದರೊಂದಿಗೆ ಕಾಗಡಿಕಟ್ಟೆ, ತಣ್ಣೀರುಹಳ್ಳ ಮತ್ತು ಹೊಸತೋಟ ಮಸೀದಿಗಳಲ್ಲೂ ಈದ್‍ಮಿಲಾದ್ ಆಚರಿಸಲಾಯಿತು.
ಕೊಟ್ಟಮುಡಿ: ಕೊಟ್ಟಮುಡಿಯಲ್ಲಿ ಮುಸ್ಲಿಂ ಬಂಧುಗಳು ಸಂಭ್ರಮದಿಂದ ಮಿಲಾದ್ ಆಚರಿಸಿದರು. ದಾರುಲ್ ಉಲುಮ್ ಮದ್ರಸದ ಅಧ್ಯಕ್ಷ ಕೆ.ಎ. ಹ್ಯಾರೀಸ್, ಉಪಾಧ್ಯಕ್ಷ ಕೆ.ಎ. ಹಂಸ, ಖತೀಬರಾದ ಮಹಮ್ಮದ್ ಆಲಿ
ಸ -ಅದಿ ಮುಂತಾದವರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.
ಸುಂಟಿಕೊಪ್ಪ: ಮಹಮ್ಮದ್ ಪೈಗಂಬರ್ ಅವರ 1493ನೇ ಜನ್ಮ ದಿನಾಚರಣೆಯನ್ನು ಮುಸ್ಲಿಂ ಭಾಂದವರು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸುಂಟಿಕೊಪ್ಪ ಈದ್‍ಮಿಲಾದ್ ಹಬ್ಬದ ಜನ್ಮದಿನದ ಅಂಗವಾಗಿ ಸಡಗರ ಸಂಭ್ರಮದಿಂದ ಪಟ್ಟಣದ ಮದರಸ ಹಾಗೂ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಗೊಳಿಸಿದ್ದರು. ಮದರಸಗಳಲ್ಲಿ ಕಳೆದ ದಿನಗಳಿಂದ ಹಿರಿಯರು ಮಕ್ಕಳಿಗೆ ಪ್ರಭೋದನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿದ್ದರು.
ಪ್ರವಾದಿ ಮಹಮ್ಮದ್ ಫೈಗಂಬರರ 1493ನೇ ಜನ್ಮದಿನದ ಅಂಗವಾಗಿ ಮುಸ್ಲಿಂ ಬಾಂಧವರು ಪಟ್ಟಣದಲ್ಲಿರುವ ವಿವಿಧ ಮಸೀದಿ ಗಳಾದ ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜೀದ್ ಗದ್ದೆಹಳ್ಳ ಹನಫಿ ಜಮಯತ್ ಮದ್ರಸಗಳಾದ ಮುನವ್ವರಲ್ ಇಸ್ಲಾಂ ಮದ್ರಸ, ಖತೀಜ ಉಮ್ಮ ಮದ್ರಸ, ನೂರಿಯ ಮದ್ರಸ, ಹನಫಿ ಮದ್ರಸಗಳಲ್ಲಿ ಮಕ್ಕಳಿಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಮಂಗಳವಾರ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಗದ್ದೆಹಳ್ಳದÀ ಗಾಂಧಿವೃತ್ತದಿಂದ ಮಧುರಮ್ಮ ಬಡಾವಣೆ ಮತ್ತು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮಕ್ಕಳು ದಫ್ ವಿಶೇಷ ಪ್ರದರ್ಶನ ವನ್ನು ನೀಡಿದರು. ಮಸೀದಿಗಳ ಮೌಲವಿ, ಧಾರ್ಮಿಕ ಗುರುಗಳು, ಮುಖಂಡರು, ಮುಸ್ಲಿಂ ಭಾಂಧವರು ಇದ್ದರು.
ವೀರಾಜಪೇಟೆ : ವೀರಾಜಪೇಟೆ ಯ ಶಾಫಿ ಜುಮಾ ಮಸೀದಿ ವತಿಯಿಂದ ಇಲ್ಲಿನ ಮುಸ್ಲಿಂ ಬಾಂಧವರು ಸೇರಿ ಲೋಕ ಪ್ರವಾದಿ ಮುಸ್ತಫಾ (ಸ) 1493ನೇ ಜನ್ಮ ದಿನಾಚರಣೆಯ ಪ್ರಯುಕ್ತ ಈದ್ ಮಿಲಾದ್‍ನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಮೂರು ದಿನಗಳವರೆಗೆ ಆಯೋಜಿಸಿದ್ದ ಈದ್ ಮಿಲಾದ್ ಪ್ರಯುಕ್ತ ಮೊದಲನೇ ದಿನ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಾ ಮಸೀದಿಯ ಅಧ್ಯಕ್ಷ ಖಾದರ್ ಬಾಷಾ ವಹಿಸಿ ಮದೀನದ ಸಂದೇಶದ ಕುರಿತು ಫೈಜಿ ಇರ್ಪಾನಿ ಭಾಷಣ ಮಾಡಿದರು.
ಎರಡನೇ ದಿನ ಪರಲೋಗಮ್ ಆಲ್ ಹಾಜ್ ಕುರಿತು ಇಸ್ಮಾಯಿಲ್ ಮುಸ್ಲಿಯಾರ್ ಭಾಷಣ ಮಾಡಿದರು. ಕೊನೆಯ ದಿನವಾದ ಇಂದು ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಬಾಂಧವರಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಖಬರಸ್ತಾನದಲ್ಲಿಯೂ ಮುಸ್ಲೀಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಈದ್ ಮಿಲಾದ್ ಪ್ರಯುಕ್ತ ಇಂದು ಸಂಜೆ ಇಲ್ಲಿನ ನಶ್ರತುಲ್ ಮದರಸದಲ್ಲಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳ ಮಿಲಾದ್ ಮೀಟ್ ಮುಕ್ತಾಯಗೊಂಡಿತು.