ಸೋಮವಾರಪೇಟೆ,ನ.21: ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 22ರಂದು (ಇಂದು) ಅಪರಾಹ್ನ 3 ಗಂಟೆಗೆ ಸ್ಥಳೀಯ ಪತ್ರಿಕಾಭವನ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ನ.ಲ. ವಿಜಯ ತಿಳಿಸಿದ್ದಾರೆ.
ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಲಿದ್ದು, ಬರಹಗಾರರಾದ ಕಿರಣ್‍ಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ವಕೀಲರಾದ ಹೆಚ್.ಸಿ. ನಾಗೇಶ್ ಅವರುಗಳು ಭಾಗವಹಿಸಲಿದ್ದಾರೆ. ಚಿತ್ರಕಲೆ ಮತ್ತು ಕ್ರೀಡಾ ಕ್ಷೇತ್ರದಿಂದ ಎಸ್. ಕೃತಿಕ, ಪತ್ರಿಕೋದ್ಯಮ ಕ್ಷೇತ್ರದಿಂದ ವಿಜಯ್ ಹಾನಗಲ್, ಜಾನಪದ ಕಲೆ-ಎಸ್.ಪಿ. ಕುಟ್ಟಪ್ಪ, ಶಿಲ್ಪಕಲೆ ಮಾದರಿ ರಚನೆ-ಬಿ. ದಯಾನಂದ, ಶಿಕ್ಷಣ- ಡಿ.ಪಿ. ಸತೀಶ್, ಸಾಹಿತ್ಯ- ಡಿ.ಎಂ. ಕುಮಾರಪ್ಪ, ವಿಶೇಷ ಕಲಾವಿದ-ಎಸ್.ಆರ್. ಶ್ರೀನಿವಾಸ್, ಸಮಾಜಸೇವೆ ಕ್ಷೇತ್ರದಿಂದ ಆಶಾ ಸತೀಶ್ ಅವರುಗಳನ್ನು ಸನ್ಮಾನಿಸಲಾಗುವದು.
ತಾ. 17ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವದು ಎಂದು ನ.ಲ. ವಿಜಯ ತಿಳಿಸಿದ್ದಾರೆ.