ವೀರಾಜಪೇಟೆ, ನ. 21: ಬಿಟ್ಟಂಗಾಲ ಸಮೀಪದ ನಾಂಗಾಲ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಶಿಬಿರವನ್ನು ನಾಂಗಾಲ ಗ್ರಾಮದ ಕಾಫಿ ಬೆಳೆಗಾರ ಕಂಬೀರಂಡ ಬಿ. ಅಯ್ಯಪ್ಪ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸೇವಾ ಮನೋಭಾವ ಕೇವಲ ಶಿಬಿರಕಷ್ಟೇ ಸೀಮಿತವಾಗಬಾರದು. ಅದನ್ನು ತಮ್ಮ ಸಂಪೂರ್ಣ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಎಂ.ಎನ್. ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಜೆ. ಪೊನ್ನಮ್ಮ ಮಾಚಯ್ಯ, ಕುಪ್ಪಂಡ ಗಂಗಮ್ಮ, ನಾಂಗಾಲ ಮಹಿಳಾ ಸಮಾಜದ ಅಧ್ಯಕ್ಷೆ ಬುಟ್ಟಿಯಂಡ ಸೀತಾ ಉತ್ತಯ್ಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಕಿಯಾ ಭಾನು ಹಾಗೂ ಸಹಾಯಕ ಯೋಜನಾಧಿಕಾರಿ ವಿಕ್ರಂ ಉಪಸ್ಥಿತರಿದ್ದರು. ರೇಷ್ಮ ಪ್ರಾರ್ಥಿಸಿದರು. ನಕಿಯಾ ಭಾನು ಸ್ವಾಗತಿಸಿದರು. ದಮಯಂತಿ ನಿರೂಪಿಸಿದರು.
ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕ ಎಸ್.ಆರ್. ತಿರುಮಲಯ್ಯ ಉದ್ಘಾಟಿಸಿದರು. ಗೋಣಿಕೊಪ್ಪಲಿನ ಕಾವೇರಿ ಕಲಾಸಿರಿ ತಂಡದ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.