ವೀರಾಜಪೇಟೆ, ನ. 20: ವಿಶೇಷ ಅಗತ್ಯ ಉಳ್ಳ ಮಕ್ಕಳ ಪೋಷಕರೊಂದಿಗೆ ಸಾರ್ವಜನಿಕರು ಒತ್ತಾಸೆ ನೀಡಿ ಅವರಿಗೆ ವಿಶೇಷ ಶಿಕ್ಷಣದೊಂದಿಗೆ, ಆಟೋಟ, ಮನರಂಜನೆಗಳನ್ನು ಏರ್ಪಡಿಸಿ ಇತರ ಮಕ್ಕಳ ಸಮಾನತೆಗನು ಗುಣವಾಗಿ ಸಮಾಜದ ಮುಖ್ಯ ವಾಹಿನಿಗೆ ತರುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು.

ವೀರಾಜಪೇಟೆ ಸಾರ್ವಜನಿಕ ಆಸ್ವತ್ರೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಆಯೋಜಿಸಿದ್ದ ವಿಶೇಷ ಆಗತ್ಯವುಳ್ಳ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಆಗತ್ಯ ಉಳ್ಳ ಮಕ್ಕಳಿಗೆ ಸರಕಾರದಿಂದ ಆರೋಗ್ಯ ಭಾಗ್ಯ ಸೇರಿದಂತೆ ಅನೇಕ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರದಿಂದ ಆಯುಷ್‍ಮಾನ್‍ಭವ ಎಂಬ ಯೋಜನೆಯು ಜಾರಿಯಲ್ಲಿದೆ. ಇದರೊಂದಿಗೆ ಅವರಿಗೆ ಆಗತ್ಯ ಶಿಕ್ಷಣ ನೀಡಿ ಉತ್ತಮ ಬದುಕನ್ನು ರೂಪಿಸಿ. ಅವರು ಯಾರಿಗೂ ಹೊರೆಯಾಗದಂತೆ ಬಾಳಿ ಬದುಕುವ ಅವಕಾಶ ನಾವು ಮಾಡಿಕೊಡಬೇಕು.

ಅವರಿಗೆ ಆಗತ್ಯವಾಗಿ ನಿರಂತರ ಇಂತಹ ಕಾರ್ಯಕ್ರಮಗಳನ್ನು ಆಯೋಜಸ ಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ ಮಾತನಾಡಿ, ವಿಶೇಷ ಚೇತನ ಮಕ್ಕಳು ಅನೇಕ ಕಾರಣಗಳಿಂದ ಜನಿಸುತ್ತಾರೆ. ಇಂತಹ ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಮಹತ್ವ ದಾಗಿರುತ್ತದೆ. ಅವÀರ ಬದುಕನ್ನು ರೂಪಿಸಲು ಶಿಕ್ಷಕರು ಹಾಗೂ ಅಧಿಕಾರಿಗಳು ಎಲ್ಲ ರೀತಿಯಿಂದಲೂ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೊ ಮಾತನಾಡಿ, ವಿಶೇಷ ಚೇತನರಲ್ಲಿ ವಿಶೇಷವಾದ ಚೇತನವಿದೆ. ಆ ಚೇತನವನ್ನು ಜಾಗೃತಿಗೊಳಿಸುವ ಕೆಲಸ ಪೋಷಕರು ಮತ್ತು ಶಿಕ್ಷಕರು ಮಾಡಬೇಕು.

ಇದಕ್ಕಾಗಿಯೇ ವೀರಾಜಪೇಟೆ ಯಲ್ಲಿ ಒಂದು ಚಿಕಿತ್ಸಾ ಘಟಕವಿದ್ದು ಇಂತಹ ಮಕ್ಕಳಿಗೆ ಈ ಘಟಕದಲ್ಲಿ ಅಗತ್ಯ ಚಿಕಿತ್ಸೆ ನೀಡಬಹುದು.

ವೀರಾಜಪೇಟೆಯಲ್ಲಿ ಕಳೆದ ಸಾಲಿನಲ್ಲಿ 125 ವಿಶೇಷ ಚೇತನರು ಶಿಬಿರದಲ್ಲಿ ಭಾಗವಹಿಸಿದ್ದು, 32 ಮಕ್ಕಳಿಗೆ ಆಗತ್ಯ ಸಲಕರಣೆ ನೀಡಲಾಗಿದೆ.

ತಾಲೂಕಿನಲ್ಲಿ 63 ಗೃಹ ಆಧಾರಿತ ಮಕ್ಕಳಿದ್ದಾರೆ ಅವರಿಗೆ ಅಲ್ಲಿಯೇ ಆಗತ್ಯ ಚಿಕಿತ್ಸೆ ಹಾಗೂ ತರಬೇತಿಯೊಂದಿಗೆ ವಾರ್ಷಿಕ ಮೂರು ಸಾವಿರ ಬೆಂಗಾವಲು ರಕ್ಷಣಾ ಭತ್ಯ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸರಕಾರಿ ಆಸ್ವತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ: ವಿಶ್ವನಾಥ್ ಸಿಂಪಿ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಕ್ಷೇತ್ರ ಶಿಕ್ಷಣಧಿಕಾರಿ ಅಂಬುಜ, ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ ಚಿಟ್ಟಿಯಪ್ಪ, ಸರ್ವ ಶಿಕ್ಷಣದ ಸಮನ್ವಯ ಅಧಿಕಾರಿ ಉತ್ತಪ್ಪ, ಜಿಲ್ಲಾ ಸರ್ವಶಿಕ್ಷಣ ಇಲಾಖೆಯ ಉಪ ಸಂಯೋಜನ ಅಧಿಕಾರಿ ಬೆಟ್ಟಪ್ಪ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.