ಕುಶಾಲನಗರ, ನ. 20: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವನಭೋಜನ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ನದಿ ತಟದಲ್ಲಿ ನಡೆದ ಧಾತ್ರಿವನ ಕಾರ್ಯಕ್ರಮದಲ್ಲಿ ವನರಾಜನಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.
ಅರ್ಚಕ ಸುಬ್ಬರಾಮ್ ನೇತೃತ್ವದಲ್ಲಿ ಪೂಜೆಗಳು ನಡೆದವು. ವನರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಸಂತೃಪ್ತಿಗೊಳಿಸಿ ಉತ್ತಮ ಮಳೆ ಬೆಳೆ ಬರಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿಜಯೇಂದ್ರ, ರಜಿನಿ ಪ್ರದೀಪ್, ಅನಿಲ್ ಶೇಷಾದ್ರಿ ಸೇರಿದಂತೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.