ನಾಪೆÉÇೀಕ್ಲು, ನ. 20: ಸಮೀಪದ ಹಳೇ ತಾಲೂಕು ಶ್ರೀ ಭಗವತಿ ದೇವಳದ ಸಮುದಾಯ ಭವನದಲ್ಲಿ ಅಂಗನವಾಡಿ ಮಕ್ಕಳಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕೇಂದ್ರ ಮಂತ್ರಿ ಅನಂತ ಕುಮಾರ್ ನಿಧನದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ಮಕ್ಕಳ ದಿನಾಚರಣೆಯನ್ನು ಹಳೇ ತಾಲೂಕು ಮಹಿಳಾ ಸಮಾಜ, ಹಳೇ ತಾಲೂಕು ಅಂಗನವಾಡಿ ಕೇಂದ್ರ ಮತ್ತು ಸ್ಥಳೀಯ ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಪೆÉÇೀಕ್ಲು ಶ್ರೀ ಭಗವತಿ ದೇವಳದ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವಿವಿಧ ವೇಷ ಭೂಷಣಗಳಿಂದ ನೆರೆದವರ ಮನ ರಂಜಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಕೇಲೇಟೀರ ಚಿತ್ರಾ ನಾಣಯ್ಯ ವಹಿಸಿದ್ದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಆರ್. ಸುಬ್ರಮಣಿ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಚಿಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಅಂಗನವಾಡಿ ಕಾರ್ಯಕರ್ತೆ ಮಣವಟ್ಟಿರ ಅಕ್ಕಮ್ಮ, ಅಂಗನವಾಡಿ ಸಲಹ ಸಮಿತಿ ಅಧ್ಯಕ್ಷೆ ಚೈತ್ರಾ, ಸದಸ್ಯೆ ಬೊಪ್ಪಂಡ ಯಶೋಧ ಮತ್ತಿತರರು ಇದ್ದರು. ಅಕ್ಕಮ್ಮ ಪ್ರಾರ್ಥಿಸಿ, ಭಾಗ್ಯವತಿ ಸ್ವಾಗತಿಸಿ, ಯಶೋಧ ವಂದಿಸಿದರು.