ವೀರಾಜಪೇಟೆ, ನ. 21: ವರ್ಷಂಪ್ರತಿ ವೀರಾಜಪೇಟೆ ತಾಲೂಕು ಕುಂದ ಗ್ರಾಮದಲ್ಲಿ ನಡೆಯುವ ಬೊಟ್ಟಿಯತ್ ಮೂಂದ್ ನಾಡ್ ಕ್ಯೆಮುಡಿಕೆ ಪುತ್ತರಿ ಕೋಲ್‍ಮಂದ್ ತಾ. 25 ರಂದು ನಡೆಯಲಿದೆ. ಪೂರ್ವಾಹ್ನ 10.30 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಮಂದ್ ಪುಡಿಪೂ, ಸಾಮೂಹಿಕ ಕೋಲಾಟ್, ಬಾಳೋಪಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಎರವಾಟ್, ಕತ್ತಿಯಾಟ್, ಕಪ್ಪೆಯಾಟ್, ವಾಲಗತಾಟ್, ಕೊಡವಪಾಟ್ ಪ್ಯೆಪೋಟಿಗಳು ನಡೆಯಲಿದೆ ಎಂದು ಕಾರ್ಯದರ್ಶಿ ಮೂಕಚಂಡ ಅಪ್ಪಣ್ಣ ತಿಳಿಸಿದ್ದಾರೆ.