ಗೋಣಿಕೊಪ್ಪ ವರದಿ, ನ. 21: ನೊಕ್ಯ ಗ್ರಾಮಕ್ಕೆ ರಾತ್ರಿ ಲಗ್ಗೆ ಇಟ್ಟ 23 ಕಾಡಾನೆಗಳನ್ನು ತಿತಿಮತಿ ಆರ್‍ಆರ್‍ಟಿ ತಂಡ ಹಾಗೂ ಮತ್ತಿಗೋಡು ವನ್ಯಜೀವಿ ವಲಯ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿತು.

ನೊಕ್ಯ ಗ್ರಾಮದ ಚೆಪ್ಪುಡೀರ ಕಾರ್ಯಪ್ಪ ಹಾಗೂ ಸಮೀಪದ ಬೆಳೆಗಾರರ ತೋಟಗಳಿಗೆ ಲಗ್ಗೆ ಇಡಲು ಬಂದ ಅನೆಗಳನ್ನು ರಾತ್ರಿ ಪಹರೆ ಕಾಯ್ದ ಇಲಾಖೆ ಸಿಬ್ಬಂದಿ ಕಾಡಿಗಟ್ಟುವಲ್ಲಿ ಯಶಸ್ವಿಯಾಯಿತು. ನೊಕ್ಯ ಗ್ರಾಮದಿಂದ ಮತ್ತಿಗೋಡು ಅರಣ್ಯಕ್ಕೆ ಸೇರಿಸಲಾಯಿತು.