ಮಡಿಕೇರಿ, ನ. 20: ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 23 ರಂದು ಸಂಜೆ 6.30 ಗಂಟೆಯಿಂದ ಕಾರ್ತಿಕ ಮಾಸದ ಪ್ರಥಮ ಹುಣ್ಣಿಮೆಯಂದು ಶ್ರೀ ಓಂಕಾರೇಶ್ವರ ಸ್ವಾಮಿಗೆ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ದಟ್ಟೋತ್ಸವವು ನಡೆಯಲಿದೆ. ಸೇವಾಕರ್ತರಾಗಿ ಮಡಿಕೇರಿಯ ವಕೀಲರಾದ ಕಾರೇರ ಎಸ್. ಕವನ್ ಕುಟುಂಬ ರಾತ್ರಿ 8.30 ಗಂಟೆಗೆ ಹುತ್ತರಿ ಕದಿರು ತೆಗೆಯುವದು. ವರ್ಷಂಪ್ರತಿ ಆಚರಿಸುವ ಹುತ್ತರಿ ಕೋಲಾಟವನ್ನು ಮಡಿಕೇರಿ ಕೋಟೆ ಆವರಣದಲ್ಲಿ ತಾ. 24 ರಂದು ಸಂಜೆ 3 ಗಂಟೆಗೆ ಪಾಂಡೀರ ಕುಟುಂಬದವರು ನಡೆಸಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ತಿಳಿಸಿದ್ದಾರೆ.