ಕುಶಾಲನಗರ, ನ. 19: ವಾಣಿಜ್ಯ ನಗರಿ ಕುಶಾಲನಗರದಲ್ಲಿ ಬಹುತೇಕ ಚಿನ್ನ, ವಜ್ರ, ಬೆಳ್ಳಿ ಅಂಗಡಿಗಳು ತಮ್ಮಷ್ಟಕ್ಕೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ, ಕಳೆದ ಎರಡು ವರ್ಷಗಳಿಂದ ಪ್ರಾರಂಭಗೊಂಡ ಚಿನ್ನ, ವಜ್ರ, ಬೆಳ್ಳಿ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಹಾಡುಹಗಲೆ ‘ನಕ್ಷತ್ರ’ ತೋರಿಸಿ ನಾಪತ್ತೆಯಾಗಿರುವ ಬಗ್ಗೆ ಗ್ರಾಹಕರು ಚಿಂತೆಗೀಡಾಗಿದ್ದಾರೆ.
ಕುಶಾಲನಗರದ ಮುಖ್ಯ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ನಕ್ಷತ್ರ ಎಂಬ ಚಿನ್ನ, ವಜ್ರ ಬೆಳ್ಳಿ ಮಾರಾಟ ಮಳಿಗೆ ಕೆಲವು ದಿನಗಳಿಂದ ಮುಚ್ಚಲ್ಪಟ್ಟಿದ್ದು ಕಂತು ಕಟ್ಟಿ ಚಿನ್ನ ಪಡೆಯುವ ಆಸೆ ಹೊತ್ತ ಗ್ರಾಹಕರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ದೂರವಾಣಿ ಮೂಲಕ ಮಾಲೀಕರನ್ನು ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದು ತಮ್ಮ ಕಂತಿನ ಹಣಕ್ಕೆ ಚಿನ್ನ ದೊರಕದಿದ್ದರೂ ಹಣ ಹಿಂತಿರುಗಿಸಿದರೆ ಸಾಕು ಎಂದು ಶಬರಿಯಂತೆ ಕಾಯುತ್ತಿದ್ದರೂ, ಅಂಗಡಿ ಮಾಲೀಕರ ಕಡೆಯಿಂದ ಯಾವದೇ ಸಕಾರಾತ್ಮಕ ಸ್ಪಂದನ ದೊರಕದ ಬಗ್ಗೆ ನೊಂದಿದ್ದಾರೆ.
-ಸಿಂಚು