ಶನಿವಾರಸಂತೆ, ನ. 19: ಶನಿವಾರಸಂತೆ ನಿವಾಸಿ ಬಿ.ಎಸ್.ಮಂಜುನಾಥ್-ನೇತ್ರಾವತಿ ದಂಪತಿ ಪುತ್ರಿ ಬಿ.ಎಂ.ತುಂಗಾನಾಥ್ ಅವರು ಆಯುರ್ವೇದÀ ವೈದ್ಯಕೀಯ (ಬಿಎಎಂಎಸ್) ಪರೀಕ್ಷೆಯಲ್ಲಿ ಸಂಶೋಧನೆ ಮತ್ತು ಅಂಕಿ ಅಂಶಗಳ ವಿಷಯದಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದು ಉತ್ತೀರ್ಣಗೊಂಡ ಹಿನ್ನಲೆಯಲ್ಲಿ ಸ್ಥಳೀಯ ನೇಕಾರರ ಕುರಿಹಿನ ಶೆಟ್ಟಿ ಸಮಾಜದ ವತಿಯಿಂದ ತುಂಗಾನಾಥ್ ಅವರನ್ನು ಸನ್ಮಾನಿಸಲಾಯಿತು.
ತುಂಗಾನಾಥ್ ಪ್ರಸ್ತುತ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸನ್ಮಾನ ಕಾರ್ಯಕ್ರಮದಲ್ಲಿ ನೇಕಾರ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಡಿ.ಅರವಿಂದ್ ರವಿ ಸಮಾಜದ ಪ್ರಮುಖರಾದ ಬಿ.ಎ.ಜೀವನ್, ಬಿ.ಎಸ್.ಪ್ರಕಾಶ್, ಎಸ್.ಆರ್.ಮಧು, ಶಾಲಿನಿರಾಜ್, ಕೆಂಚಮ್ಮ, ಜಯಮ್ಮ, ಚಂದ್ರಕಲಾ, ಆರತಿ, ಬಿ.ಕೆ.ಮಂಜುನಾಥ್, ಬಿ.ಕೆ.ಚಂದ್ರಶೇಖರ್ ಮುಂತಾದವರು ಇದ್ದರು.