ಶ್ರೀಮಂಗಲ, ನ. 19: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ಮೊಲೀಸರು ದಾಳಿ ನಡೆಸಿ ಒಂದು ಟ್ರ್ಯಾಕ್ಟರ್, ಮರಳು ತೆಗೆಯಲು ಬಳಸುತ್ತಿದ್ದ ಕಬ್ಬಿಣದ ತೆಪ್ಪಗಳು ಹಾಗೂ ಹಲವು ಲೋಡು ಮರಳು ವಶಪಡಿಸಿಕೊಂಡಿದ್ದಾರೆ.
ಶ್ರೀಮಂಗಲ ಠಾಣಾಧಿಕಾರಿ ಅಯ್ಯಣ್ಣ ಗೌಡ ನೇತೃತ್ವದಲ್ಲಿ ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮಣತೀರ್ಥ ನದಿಯಲ್ಲಿ ಮರಳು ಗಣಿಗಾರಿಕೆ ಹಾಗೂ ಮರಳನ್ನು ಸಾಗಿಸುತ್ತಿದ್ದ ಸಂದರ್ಭ ಧಾಳಿ ನಡೆಸಿದ್ದು ಟಿ.ಶೆಟ್ಟಿಗೇರಿಯ ಎಂ. ಶ್ಯಾಮ್‍ಗೆ ಸೇರಿದ ಟ್ರ್ಯಾಕ್ಟರ್ ಮತ್ತು ಎ.ಸೋಮಣ್ಣಗೆ ಸೇರಿದ ಎರಡು ಲೋಡ್ ಮರಳು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.