ಗೋಣಿಕೊಪ್ಪ, ನ. 17: 2.43 ಕೋಟಿ ವೆಚ್ಚದಲ್ಲಿ ಹಾತ್ತೂರು ಗ್ರಾ.ಪಂ. ವ್ಯಾಪ್ತಿಯ ಪೊನ್ನಂಪೇಟೆ, ಈಚೂರು, ಹಾತ್ತೂರು ರಸ್ತೆಯ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 13.50 ಮೀಟರ್ ಉದ್ದ ಹಾಗೂ 10.50 ಮೀಟರ್‍ಗಳಷ್ಟು ಅಗಲ ಹೊಂದಿದ ಸೇತುವೆ ನಿರ್ಮಾಣವು ಎಲ್.ಒ.ಎಫ್. ಸಂಸ್ಥೆಯಿಂದ ನಡೆಯಲಿದೆ. 3 ತಿಂಗಳೊಳಗೆ ಕಾಮಗಾರಿ ಪೂರ್ಣ ಗೊಂಡು ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಾಗುವದು ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಡೆರೆಂಡ ಭವ್ಯ, ಚಿಯಕ್ ಪೂವಂಡ, ಬೋಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎನ್. ಜಯಂತಿ, ಉಪಾಧ್ಯಕ್ಷ ಗುಮ್ಮಟ್ಟಿರ ದರ್ಶನ್ ನಂಜಪ್ಪ, ಸದ್ಯರುಗಳಾದ ಕುಪ್ಪಂಡ ಗಿರೀಶ್ ಪೂವಣ್ಣ, ಶ್ರೀನಿವಾಸ್, ಹಾತ್ತೂರು ವಿ.ಎಸ್.ಎಸ್.ಎನ್. ಕೊಡೆಂದೇರ ಬಾಂಡ್ ಗಣಪತಿ ಪಿ.ಡಿ.ಒ. ತಿಮ್ಮಯ್ಯ, ಕೆ.ಆರ್.ಡಿ.ಸಿ.ಎಲ್. ಇಂಜಿನೀಯರ್ ಪದ್ಮನಾಭ, ಮಂಗಳೂರು ಎಲ್.ಒ.ಎಫ್. ಸಂಸ್ಥೆಯ ಇಂಜಿನಿಯರ್ ಮಾಚರಂಡ ಚಂಗಪ್ಪ, ಫೆಡರೇಶನ್ ನಿರ್ದೇಶಕ ಮಲ್ಲಂಡ ಮದು ದೇವಯ್ಯ ಸೆರಿದಂತೆ ಗ್ರಾಮಸ್ಥರು ಹಾಜರಿದ್ದರು.