ಮಡಿಕೇರಿ, ನ. 17: ಸ್ಥಳೀಯ ದೈನಿಕವೊಂದರಲ್ಲಿ ಸಿದ್ದಾಪುರದ ಪತ್ರಕರ್ತ ಎಂ.ಎ. ಅಜೀಜ್ ವಿರುದ್ಧ ವರದಿಯೊಂದನ್ನು ಪ್ರಕಟಿಸಿದ್ದ ಪ್ರಕರಣ ಸಂಬಂಧ ಅಲ್ಲಿನ ಇನ್ನೋರ್ವ ಪತ್ರಕರ್ತ ವಸಂತ್ ವಿರುದ್ಧ ಹೂಡಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಇಂದು ಪೊಲೀಸರು ವಸಂತ್‍ನನ್ನು ಬಂಧಿಸಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯದ ವಾರೆಂಟ್ ಬಳಿಕವೂ, ಕೋರ್ಟ್‍ಗೆ ಹಾಜರಾಗದಿದ್ದ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿದ್ದರು. ನ್ಯಾಯಾಲಯವು ವಸಂತ್‍ಗೆ ಷರತ್ತು ಬದ್ಧ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ.