ಮಡಿಕೇರಿ, ನ. 17: ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಮಡಿಕೇರಿ, ನೇತಾಜಿ ಯುವಕ ಮಂಡಲ ತಾಳತ್ತಮನೆ, ನೇತಾಜಿ ಯುವತಿ ಮಂಡಳಿ ತಾಳತ್ತಮನೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ತಾಳತ್ತಮನೆಯ ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಧ್ವಜಾರೋಹಣವನ್ನು ತಾಳತ್ತಮನೆಯ ಬೆಳೆಗಾರ ಕೆ.ಎಸ್. ಚಂದ್ರಶೇಖರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷೆ ಹಾಗೂ ಸಲಹೆಗಾರರಾದ ಎಸ್.ಕೆ. ಕಮಲ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನ್ಯಾಯಾಂಗ ಇಲಾಖೆಯ ಕೆ.ಎನ್. ಸುನಂದ, ತಾಳತ್ತಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಬಿ. ಭಾರತಿ, ನೇತಾಜಿ ಯುವತಿ ಮಂಡಳಿ ಅಧ್ಯಕ್ಷೆ ಮಂಜುಳ ಆನಂದ್ ಉಪಸ್ಥಿತರಿದ್ದರು.
ಬಿ.ಬಿ. ದೇವಕಿ ಪ್ರಾರ್ಥಿಸಿ, ಪದ್ಮರವಿ ನಿರೂಪಿಸಿದರು. ಮಾಜಿ ಅಧ್ಯಕ್ಷೆ ವಿ.ಆರ್. ನೇತ್ರಾವತಿ ಸ್ವಾಗತಿಸಿದರು. ಶಾಲಾ ಮಕ್ಕಳಿಗೆ ಸೂಜಿಗೆ ದಾರ ಮತ್ತು ನಿಂಬೆ ಹಣ್ಣಿನ ಓಟದ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಸರೋಜ ವಂದಿಸಿದರು.