ಸೋಮವಾರಪೇಟೆ, ನ. 17: ಚೈಲ್ಡ್‍ಲೈನ್ ಸಂಸ್ಥೆಯ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಭಿಕ್ಷಾಟನೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕಿ ಲಲಿತ ಅವರು ವಹಿಸಿದ್ದರು. ಬಿಆರ್‍ಪಿ ಶಶಿಧರ್, ಪೊಲೀಸ್ ಇಲಾಖೆಯ ಸುರೇಶ್, ಉಮೇಶ್, ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನೈನಾ, ಸದಸ್ಯೆ ರಮ್ಯ, ಮುಖ್ಯಶಿಕ್ಷಕ ತಳವಾರ್, ಚೈಲ್ಡ್ ಲೈನ್ ಸಂಸ್ಥೆಯ ನವೀನ, ಪ್ರವೀಣ್, ಕುಮಾರಿ, ಯೋಗೇಶ್ ಅವರುಗಳು ಉಪಸ್ಥಿತರಿದ್ದರು.
ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಕುರಿತು ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಮಗುವಿಗೆ ಶಿಕ್ಷಣ ನೀಡುವದು ಎಲ್ಲಾ ಪೋಷಕರ ಜವಾಬ್ದಾರಿಯಾಗಿದ್ದು, ಮಕ್ಕಳನ್ನು ಭಿಕ್ಷಾಟನೆಗೆ ಉಪಯೋಗಿಸಿಕೊಳ್ಳುವದು ಕಂಡುಬಂದರೆ ತಕ್ಷಣ 1098 ಸಂಖ್ಯೆಗೆ ಮಾಹಿತಿ ನೀಡಬೇಕು. ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಚೈಲ್ಡ್‍ಲೈನ್‍ನ ಕಾರ್ಯಕರ್ತರು ತಿಳಿಸಿದರು.