ಮಡಿಕೇರಿ, ನ. 16: ಈ ಹಿಂದೆ ಎಲ್ಲ ಕೊಡಗು ಎಂದಾಕ್ಷಣ ಸವಿ ಸವಿ ನೆನಪುಗಳು ಮರುಕಳಿಸುತ್ತಿದ್ದವು. ಆದರೆ ಇದೀಗ ದುರಂತದ ದುಃಖದ ನೆನಪುಗಳು ಮೂಡುತ್ತಿವೆ. ಕೊಡಗು ಹಿಂದಿನಂತೆ ಆಗಬೇಕು. ಈ ನಿಟ್ಟಿನಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯಾಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ಇಲ್ಲಿನ ಪತ್ರಕಾಭವನದಲ್ಲಿ ಆಯೋಜಿತವಾಗಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ಹಾಗೂ ಸಂತ್ರಸ್ತ ಪತ್ರಕರ್ತನಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಮುಂದೆ ದೊಡ್ಡ ಸವಾಲಿದೆ. ಜನಮುಖಿ ಕೆಲಸದೊಂದಿಗೆ ಕೊಡಗು ಪುನರ್ ನಿರ್ಮಾಣದಲ್ಲೂ ಕೈಜೋಡಿಸಬೇಕಿದೆ. ಆಡಳಿತದೊಂದಿಗೆ ಕಣ್ಣು, ಕಿವಿಯಾಗಿ ಸಲಹೆ ನೀಡಬೇಕಿದೆ. ಇಲ್ಲವಾದಲ್ಲಿ ಯೋಜನೆ ಸತ್ತು ಹೋಗಲಿದೆ. ದುರಂತ ಸಂಭವಿಸಿದ ಸಂದರ್ಭ ಎಲ್ಲರೂ ಮಿಡಿದಿದ್ದಾರೆ. ನೆರವು ನೀಡಿದ್ದಾರೆ. ಆದರೆ ಅದು ಯಾವ ರೀತಿ ಬಳಕೆ ಆಗಿದೆ ಎಂಬದೇ ದೊಡ್ಡ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ಅಗತ್ಯತೆಯಿದ್ದು, ಈ ಸಂಬಂಧ ರಾಜ್ಯ ಸಂಘದ ವತಿಯಿಂದ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಪ್ರಾಧಿಕಾರ ಜಾರಿಗೊಳಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗು ವದೆಂದು ಅವರು ಹೇಳಿದರು.ಜಿಲ್ಲಾಡಳಿತದ ಮೂಲಕ ನೀಡಲಾಗುವ ದೇಣಿಗೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸುಗ್ಗಿಯಾಗಬಾರದು, ಇಂತಹವುಗಳನ್ನು ತಡೆಯುವ ನಿಟ್ಟಿನಲ್ಲಿ ಸಾಂಘಿಕ ಶಕ್ತಿಯಾಗಿ ಜವಾಬ್ದಾರಿ ಹೊರಬೇಕೆಂದು ಹೇಳಿದರು. ಸಂಘವನ್ನು ಬಲಿಕೊಡದೆ ಮುನ್ನಡೆಸ ಬೇಕೆಂದ ಅವರು, ದುರಂತದಲ್ಲಿ ಸಂತ್ರಸ್ತರಾದ ಜಿಲ್ಲೆಯ ಪತ್ರಕರ್ತರ ನೆರವಿಗೆ ರೂ. 10 ಲಕ್ಷ ನೀಡುವ ಗುರಿ ಇದೆ. ಸದ್ಯಕ್ಕೆ 5 ಲಕ್ಷ ನೀಡುವ ದಾಗಿ ಹೇಳಿದ ಅವರು ಇದೀಗ ರೂ. 2.50 ಲಕ್ಷ ನೀಡುವದಾಗಿ ಹೇಳಿ ರೂ. 2.50 ಲಕ್ಷ ಮೊತ್ತದ ಚೆಕ್ ಅನ್ನು ಸಂಘದ ಅಧ್ಯಕ್ಷೆ ಸವಿತಾ ರೈ ಅವರಿಗೆ ಹಸ್ತಾಂತರಿ ಸಿದರು. ಅಲ್ಲದೆ ಬೆಂಗಳೂರು ಗ್ರಾಮಾಂತರ ಸಂಘದ ಮೂಲಕ ರೂ. 2 ಲಕ್ಷ ಒದಗಿಸಿ ಕೊಡುವದಾಗಿ ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಜಿ. ರಾಜೇಂದ್ರ ಅವರು, ಜಿಲ್ಲಾ ಸಂಘವು ವೈವಿಧ್ಯತೆ ಯಲ್ಲಿ ಏಕತೆಯನ್ನು ಹೊಂದಿದೆ ಎಂದರೆ ಅತಿಶಯೋಕ್ತಿಯಾಗ ಲಾರದು. ವಿಭಿನ್ನ ಮನೋಭಾವದ ಪತ್ರಕರ್ತರಿದ್ದಾರೆ. ಅನುಕರಣೆ ಮಾಡುವವರು ಕಡಿಮೆ. ಎಲ್ಲರೂ ಹೊಂದಾಣಿಕೆಯಿಂದ ವರದಿಗಾರಿಕೆ ಮಾಡುತ್ತಾರೆ. ಆದರೇ ಕೆಲವೊಂದು ಸಂದರ್ಭದಲ್ಲಿ ವೈರುಧ್ಯತೆ ಆಗುತ್ತದೆ. ಮುಕ್ತವಾಗಿ ಮಾತು, ಸಂದೇಶ ರವಾನೆ ಮಾಡುತ್ತಾ ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಹೊಂದಾಣಿಕೆಯಿಂದ ಕ್ರಿಯಾಶೀಲರಾಗಿರಬೇಕೆಂದು ಕರೆ ನೀಡಿದರು.
(ಮೊದಲ ಪುಟದಿಂದ) ಸಮಾಜದಲ್ಲಿ ತುಳಿಯುವವರ ಸಂಖ್ಯೆ ಜಾಸ್ತಿ ಇದೆ. ಇಂತಹ ಸಂದರ್ಭದಲ್ಲಿ ಸಾಂಘಿಕ ಶಕ್ತಿಯೊಂದಿಗೆ ಸರಿಪಡಿಸಿP Éೂಳ್ಳುವದು ಉತ್ತಮ. ಪ್ರಹಾರ ಮಾಡುವದು ಬೇಡ, ಎಲ್ಲರಲ್ಲೂ ದೋಷಗಳಿರುತ್ತವೆ. ಬಗೆಹರಿಸಿಕೊಳ್ಳು ವದೊಳಿತೆಂದು ಸಲಹೆ ನೀಡಿದರು. ಸಂಘದ ಚಟುವಟಿಕೆಗಳೊಂದಿಗೆ ಮೆದುಳು ಚುರುಕಾಗಲು ತಿಂಗಳಿ ಗೊಮ್ಮೆ ಯಾದರೂ ಮನರಂಜನೆ ಬೇಕಾಗುತ್ತದೆ. ಮನಸ್ಸನ್ನು ಆಸಕ್ತಿಯುಳ್ಳ ಕ್ಷೇತ್ರದತ್ತಲೂ ಹರಿಯ ಬಿಡಬೇಕಾ ಗುತ್ತದೆ. ಈ ರೀತಿಯ ಚಟುವಟಿP Éಯತ್ತಲೂ ಚಿಂತನೆ ಹರಿಸಲು ಸಲಹೆ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಅವರು, ಪತ್ರಿಕೆ, ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳು ಪ್ರಬಲವಾಗಿರುವ ಕಾಲದಲ್ಲಿ ಪತ್ರಕರ್ತರನ್ನು ವಿಭಿನ್ನವಾಗಿ ನೋಡುವ ಪರಿಸ್ಥಿತಿ ಬಂದೊದಗಿದೆ. ಇಂತಹ ಸನ್ನಿವೇಶದಲ್ಲೂ ಮುದ್ರಣ ಮಾಧ್ಯಮ ಪ್ರಬಲವಾಗಿ ನೈಜ್ಯತೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು. ಪತ್ರಕರ್ತರಲ್ಲಿ ಜವಾಬ್ದಾರಿಯಿದ್ದು, ಕ್ರೀಡಾ ಮನೋಭಾವ ಹೊಂದಿರಬೇಕು. ಎಡವಿದರೆ ಮಾತ್ರ ಪಾಠ ಕಲಿಯಲು ಸಾಧ್ಯ ಎಂದ ಅವರು, ಜಿಲ್ಲೆಯಲ್ಲಿ ದುರಂತ ಸಂಭವಿಸಿದ ಸಂದರ್ಭ ವಸ್ತುನಿಷ್ಠ ವರದಿ ಮಾಡಿದ್ದಾರೆ. ಜಿಲ್ಲೆ ಮೊದಲಿನಂತಾಗಲೂ ಪ್ರಾಧಿಕಾರದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘದ ಮೂಲಕ ಎಲ್ಲರನ್ನು ಒಂದುಗೂಡಿಸಿ ಚರ್ಚಿಸಿ ಒತ್ತಡ ಹೇರಬೇಕಿದೆ. ತಮ್ಮ ಐಎನ್ಟಿಯುಸಿ ಸಂಘಟನೆ ವತಿಯಿಂದ ಸಹಕಾರ ನೀಡುವದಾಗಿ ಹೇಳಿದರು.
ಪತ್ರಕರ್ತರು ಅತಂತ್ರ ಸ್ಥಿತಿಯಲ್ಲಿದ್ದು, ಐಎನ್ಟಿಯುಸಿಯಲ್ಲಿ ಕಾರ್ಮಿಕ ವಿಮಾ ಯೋಜನೆಯಿದ್ದು, ಒಟ್ಟು 3 ಸಾವಿರ ಹಣ ಪಾವತಿಸ ಬೇಕಿದೆ. ಈ ಪೈಕಿ ಸರಕಾರ ಗಳು ರೂ. 2 ಸಾವಿರ ಪಾವತಿಸಲಿದ್ದು, ಪತ್ರಕರ್ತರು ಪಾವತಿಸಬೇಕಾದ ರೂ. 1 ಸಾವಿರ ಮೊತ್ತವನ್ನು ಮುಂದಿನ 3 ವರ್ಷದ ಅವಧಿಗೆ ತಮ್ಮ ಕಂಪೆನಿ ವತಿಯಿಂದ ಪಾವತಿಸಲಾಗುವದು. ಈ ಬಗ್ಗೆ ಕಾರ್ಯೋನ್ಮುಖರಾಗುವಂತೆ ಸಂಘದ ಪದಾಧಿಕಾರಿಗಳಿಗೆ ಹೇಳಿದರು. ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ನಿರ್ಗಮಿತ ಅಧ್ಯಕ್ಷ ರಮೇಶ್ ಕುಟ್ಟಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಅವರುಗಳು ನೂತನ ಅಧ್ಯಕ್ಷೆ ಸವಿತಾ ರೈ ಹಾಗೂ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ, ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬೆಂಗಳೂರು ಗ್ರಾಮಾಂತರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಅವರು ನೂತನ ಅಧ್ಯಕ್ಷೆ ಸವಿತಾ ರೈ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನೂತನ ಮಹಿಳಾ ಘಟಕವನ್ನು ಉದ್ಘಾಟಿಸ ಲಾಯಿತು. ಹೊಸ ಲಾಂಛನ ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳಾದ ಕೆರಗೋಡು ಸೋಮಶೇಖರ್, ಲಿಂಗರಾಜು, ನಂದಕುಮಾರ್ ಪಾಲ್ಗೊಂಡಿದ್ದರು. ಸಂಘದ ನಿರ್ದೇಶಕ ಕುಡೆಕಲ್ ಗಣೇಶ್ ಪ್ರಾರ್ಥಿಸಿದರೆ, ಆನಂದ್ ಕೊಡಗು ನಿರೂಪಿಸಿದರೆ, ಅನು ಕಾರ್ಯಪ್ಪ ಸ್ವಾಗತಿಸಿ, ಬಿ.ಡಿ. ರಾಜು ರೈ ವಂದಿಸಿದರು.