ಗೋಣಿಕೊಪ್ಪ ವರದಿ, ನ. 17: ಬಾಗಲಕೋಟೆ ಜಿಲ್ಲೆಯ ಮುದೊಳ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮುವೆಲ್ ಮೆಮೋರಿಯಲ್ ಸ್ಕೂಲ್ ಮತ್ತು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ 14 ವಯೋಮಿತಿಯ ಬಾಲಕಿಯರ ಹ್ಯಾಂಡ್‍ಬಾಲ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ತಂಡ ರನ್ನರ್ ಅಪ್ ಸ್ಥಾನ ಗಿಟ್ಟಿಸಿಕೊಂಡಿದೆ.

ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆ ಹಾಗೂ ಮೊರಾರ್ಜಿ ಶಾಲೆಯ ಆಟಗಾರರು ಭಾಗವಹಿಸಿದ್ದ ತಂಡದಲ್ಲಿ ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆಯ ಆಟಗಾರರುಗಳಾದ ನಿತ್ಯಾ ದೇಚಕ್ಕ, ದೃಷ್ಠಿ ದೇಚಮ್ಮ, ಪುಣ್ಯ ಪೂವಮ್ಮ, ಬಿಜ್ಲಿ ಮುತ್ತಮ್ಮ, ಕಾಂಚನ್ ಕಮಲಾಕ್ಷಿ, ಕೀತನ್ ಕಾವೇರಮ್ಮ, ದಯಾನ್ ದೇಚಕ್ಕ, ದಿಶಾ ಪೊನ್ನಮ್ಮ, ಯುಕ್ತಾ ಮುತ್ತಮ್ಮ, ಕೆ.ಟಿ. ತಶ್ವಿ, ಮೊರಾರ್ಜಿ ಶಾಲೆಯ ಎ.ಟಿ. ಭಾವನಾ, ಟಿ.ವಿ. ಮನ್ಸಾ, ತರಬೇತುದಾರರಾಗಿ ಗಾನ್ ಗಣಪತಿ ಪಾಲ್ಗೊಂಡಿದ್ದರು.