ಗೋಣಿಕೊಪ್ಪ ವರದಿ, ನ. 17: ಭೂಕುಸಿತ ಪ್ರದೇಶದ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಮೂಲಕ ಆಶ್ರಯ ನೀಡಿರುವ ಪೊನ್ನಂಪೇಟೆ ಸಾಯಿ ಶಂಕರ್ ಶಾಲೆಗೆ ದಾನದ ರೂಪದಲ್ಲಿ ಪಾಲ್ಗೊಳ್ಳುತ್ತಿರುವ ದಾನಿಗಳನ್ನು ನೆನೆಯುವ ಮೂಲಕ ಮಕ್ಕಳ ದಿನಾ ಚರಣೆಯನ್ನು ಆಚರಿಸಲಾಯಿತು.

ಸಾಯಿಶಂಕರ್ ವಿದ್ಯಾಸಂಸ್ಥೆ ಅಧ್ಯಕ್ಷ ಕೊಳೆರ ಝರು ಗಣಪತಿ ಮತ್ತು ಬಳಗ ದಾನಿಗಳನ್ನು ನೆನೆದರು. ಕೊಳೆರ ಝರು ಗಣಪತಿ ಮಾತನಾಡಿ, ಸಂತ್ರಸ್ತರ ಮಕ್ಕಳಿಗೆ ವಿದ್ಯಾ ನೀಡಲು ಶಿಕ್ಷಣ ಸಂಸ್ಥೆ ಯೋಜನೆ ರೂಪಿಸಿದಾಗ ದಾನಿಗಳು ಬೆಂಬಲ ಸೂಚಿಸಿದರು. ಇದರ ಪರಿಣಾಮ 130 ಮಕ್ಕಳಿಗೆ ಆಶ್ರಯ ನೀಡಲು ಸಹಕಾರಿ ಯಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಅವರ ಸರ್ವತೋ ಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವದು. ದಾನಿಗಳು ನೀಡಿದ ದಾನದ ಸಂಪೂರ್ಣ ಮಾಹಿತಿಯನ್ನು ನೀಡಿದರು.

ದಾನಿ ನಡಿಕೇರಿಯಂಡ ಚಿಣ್ಣಪ್ಪ ಮಾತನಾಡಿ, ಮುಂದಿನ ದಿನದಲ್ಲಿ ಅವರ ಭವಿಷ್ಯವನ್ನು ಮತ್ತಷ್ಟು ಉಜ್ವಲ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಬೇಕಾಗಿದೆ ಎಂದರು ಡಾ. ಸೋನಿಯಾ ಮಂದಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ದತ್ತಿ ನಿಧಿ ಸ್ಥಾಪಿಸುವ ಅನಿವಾರ್ಯತೆ ಇದೆ. ನನ್ನ ಕುಟುಂಬದಿಂದ ದತ್ತಿ ನಿಧಿ ಸ್ಥಾಪನೆ ಮಾಡುವದಾಗಿ ಘೋಷಿಸಿದರು.

ಮಾಜಿ ಎಂ.ಎಲ್.ಸಿ. ಚೆಪ್ಪುಡಿರ ಅರುಣ್ ಮಾಚಯ್ಯ, ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ದಾನಿಗಳಾದ ಮಾರ್ಚಂಡ ಗಣೇಶ್ ಪೊನ್ನಪ್ಪ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಡಾ. ಫಾತಿಮ ಕಾರ್ಯಪ್ಪ, ಅರಮಣಮಾಡ ಸತೀಶ್, ಕೈಬುಲಿರ ಪಾರ್ವತಿ, ಕಾಡ್ಯಮಾಡ ಜಿಮ್ಮಿ ಅಣ್ಣಯ್ಯ, ಮಂದಪಂಡ ಸದಾ ಚೆಂಗಪ್ಪ ಚೈಯಂಡ ಸತ್ಯ, ಅಪ್ಪಾರಂಡ ಸಾಗರ್ ಉಪಸ್ಥಿತರಿದ್ದರು.

ದಾನಿಗಳ ನೆನಪಿಗಾಗಿ ದಾನಿ ಕೈಬಿಲಿರ ಪಾರ್ವತಿ ಅವರು ಆವರಣದಲ್ಲಿ ಹಣ್ಣಿನ ಗಿಡ ನೆಟ್ಟರು.