ಮಡಿಕೇರಿ, ನ. 16: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂಬರುವ ಡಿಸೆಂಬರ್ 22 ಮತ್ತು 23 ರಂದು ನಾಪೋಕ್ಲುವಿನಲ್ಲಿ ನಡೆಸಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಮಾಡಲಿಚ್ಚಿಸುವವರು ತಮ್ಮ ಪುಸ್ತಕದ ಹೆಸರು ಮತ್ತು ತಮ್ಮ ವಿಳಾಸವನ್ನು ನೀಡಿ ಹೆಸರನ್ನು ತಾ. 20 ರೊಳಗೆ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಿ.ಎಸ್. ಲೋಕೇಶ್‍ಸಾಗರ್ (8277066123) ಇವರನ್ನು ಸಂಪರ್ಕಿಸಲು ತಿಳಿಸಿದೆ.