ಮಡಿಕೇರಿ, ನ. 17: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಗ್ರಾ.ಪಂ. ನೌಕರರು, ಇಲ್ಲಿನ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದುರು ನಿನ್ನೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾ.ಪಂ. ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ತಮ್ಮ ಬೇಡಿಕೆ ಈಡೇರಿಸುವ ತನಕ ನಿರಂತರ ಹೋರಾಟದ ಸುಳಿವು ನೀಡಿದರು. ರಾಜ್ಯದಲ್ಲಿ 61 ಸಾವಿರ ಗ್ರಾ.ಪಂ. ನೌಕರರು ಅತಂತ್ರ ಬದುಕು ನಡೆಸುತ್ತಿರುವ ಬಗ್ಗೆ ಅವರು ವಿಷಾಧಿಸಿದರು.
ಮುಂದಿನ ಜ. 8 ಹಾಗೂ 9ರಂದು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಸಲಾಗುವದು ಎಂದು ಅವರು ಘೋಷಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಸಿ.ಆರ್. ರವಿ, ಸಜಿತ್, ವಸಂತ್ ಸೇರಿದಂತೆ ಗ್ರಾ.ಪಂ. ನೌಕರರು ಪಾಲ್ಗೊಂಡು ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರು.