ಗೋಣಿಕೊಪ್ಪ ವರದಿ, ನ. 15 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಬಿ. ಡಿವಿಜûನ್ ಹಾಕಿ ಲೀಗ್‍ನ ಗುರುವಾರದ ಪಂದ್ಯಾವಳಿಯಲ್ಲಿ 5 ತಂಡಗಳು ಗೆಲುವು ದಾಖಲಿಸಿದವು. ಟಾಟಾ, ಬಲಮುರಿ, ಕುಂದ, ಶ್ರೀಮಂಗಲ ನಾಡ್ ಕೊಡವ ಸಮಾಜ ಹಾಗೂ ಕೋಣನಕಟ್ಟೆ ಜಯ ಪಡೆದವು.

ಫಲಿತಾಂಶ

ಕೋಣನಕಟ್ಟೆ ತಂಡವು ಮಲೆನಾಡ್ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ಕೋಣನಕಟ್ಟೆ ಪರ 13 ನೇ ನಿಮಿಷದಲ್ಲಿ ಗಣಪತಿ, 29 ರಲ್ಲಿ ಗುರು, 49 ರಲ್ಲಿ ಯಶ್ವಿನ್ ತಲಾ ಒಂದೊಂದು ಗೋಲು ಹೊಡೆದರು.

ಶ್ರೀಮಂಗಲ ನಾಡ್ ಕೊಡವಸಮಾಜ ತಂಡ ಮರೆನಾಡ್ ವಿರುದ್ದ 3-0 ಗೋಲುಗಳಿಂದ ಜಯ ಸಾಧಿಸಿತು. ಶ್ರೀಮಂಗಲ ಪರ 11 ನೇ ನಿಮಿಷದಲ್ಲಿ ಸೋಮಣ್ಣ, 12 ರಲ್ಲಿ ಮಿಥುನ್, 42 ರಲ್ಲಿ ಚೆಂಗಪ್ಪ ತಲಾ ಒಂದೊಂದು ಗೋಲು ಬಾರಿಸಿ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದರು.

ಕುಂದ ತಂಡವು ಡ್ರಿಬ್‍ಲ್ಸ್ ಹೆಂಪ್ ವಿರುದ್ದ 3-0 ಗೋಲುಗಳಿಂದ ಜಯಿಸಿತು. ಕುಂದ ಪರ 2 ಹಾಗೂ 22 ನೇ ನಿಮಿಷಗಳಲ್ಲಿ ಬೋಪಣ್ಣ, 10 ರಲ್ಲಿ ಜೋಯಪ್ಪ ಗೋಲು ಬಾರಿಸಿದರು.

ಬಲಮುರಿ ತಂಡ ಗುಂಡ್ಯತ್ ಅಯ್ಯಪ್ಪ ತಂಡದ ವಿರುದ್ದ 3-2 ಗೋಲುಗಳ ಜಯ ಸಾಧನೆ ಮಾಡಿತು. ಬಲಮುರಿ ಪರ 5 ಹಾಗೂ 14 ನೇ ನಿಮಿಷಗಳಲ್ಲಿ ಶಾನ್, 48 ರಲ್ಲಿ ವಿನೋದ್, ಗುಂಡ್ಯತ್ ಪರ 19 ರಲ್ಲಿ ಮಂಜು, 35 ರಲ್ಲಿ ಪ್ರಜ್ವಲ್ ಗೋಲು ಹೊಡೆದರು.

ಟಾಟಾ ತಂಡ ಬೇತು ವಿರುದ್ದ 6-1 ಗೋಲುಗಳ ಭರ್ಜರಿ ಜಯ ಸಾಧಿಸಿತು. ಟಾಟಾ ಪರ 9 ಹಾಗೂ 18 ನೇ ನಿಮಿಷಗಳಲ್ಲಿ ಗಣಪತಿ, 15 ಹಾಗೂ 25 ರಲ್ಲಿ ಶಿರಾಗ್ ತಲಾ 2 ಗೋಲು ಹೊಡೆದರು. 12 ರಲ್ಲಿ ದಿಲನ್, 14 ರಲ್ಲಿ ಕಿರಣ್ ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. ಬೇತು ಪರ 24 ನೇ ನಿಮಿಷದಲ್ಲಿ ಮೋಹನ್ ಏಕೈಕ ಗೋಲು ಹೊಡೆದರು.

ವರದಿ - ಸುದ್ದಿಪುತ್ರ