ವೀರಾಜಪೇಟೆ, ನ. 15: ವೀರಾಜಪೇಟೆಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರ ತಾ. 16ರಿಂದ (ಇಂದಿನಿಂದ) ಒಂದು ವಾರಗಳ ಕಾಲ ಕಳತೋಡು-ನಾಂಗಾಲ ಗ್ರಾಮದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಶಿಬಿರದ ಉದ್ಘಾಟನೆಯನ್ನು ನಾಂಗಾಲ ಗ್ರಾಮದ ಕಾಫಿ ಬೆಳಗಾರರಾದ ಕಂಬೀರಂಡ ಬಿ.ಅಯ್ಯಪ್ಪ ನೆರವೇರಿಸಲಿ ದ್ದಾರೆ. ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಕಾವೇರಿ ಎಜುಕೇಶನ್ ಸೊಸೈಟಿಯ ನಿರ್ದೇಶಕರಾದ ಡಾ||. ಜೆ.ಪೊನ್ನಮ್ಮ ಮಾಚಯ್ಯ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಬೆಳ್ಳಿಯಪ್ಪ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಪ್ಪಂಡ ಗಂಗಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅಪ್ಪಂಡೇರಂಡ ಭವ್ಯ, ನಾಂಗಾಲ ಮಹಿಳಾ ಸಮಾಜದ ಅಧ್ಯಕೆÀ್ಷ ಬುಟ್ಟಿಯಂಡ ಸೀತಾ ಉತ್ತಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿ ದ್ದಾರೆ. ತಾ. 22ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.