ಕುಶಾಲನಗರ, ನ. 15: ಕುಶಾಲನಗರ ಸಮೀಪ ಅರಣ್ಯ ಸಂಚಾರಿ ದಳದ ತಂಡ ಅಕ್ರಮ ಮರ ಸಾಗಾಟ ಮಾಡುತ್ತಿರುವ ಪ್ರಕರಣವೊಂದನ್ನು ಪತ್ತೆಹಚ್ಚಿದ್ದಾರೆ. ಮಿನಿ ಲಾರಿಯೊಂದರಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮಡಿಕೇರಿ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಹೆಚ್.ಜೆ.ದೇವರಾಜ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಸಿ.ನಾರಾಯಣ ಮೂಲ್ಯ, ಕೆ.ಎನ್.ದೇವಯ್ಯ ಅವರುಗಳು ಕಾರ್ಯಾಚರಣೆ ಮಾಡಿದ್ದು ಲಾರಿ ಮತು ಮರವನ್ನು ವಶಪಡಿಸಿಕೊಂಡಿದ್ದು ಚಾಲಕ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜು ರೂ. 3 ಲಕ್ಷದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಕೆ.ಟಿ.ಗಣೇಶ್ ಕುಮಾರ್, ಚಾಲಕರುಗಳಾದ ಎಂ.ಎಂ.ಪೂವಯ್ಯ, ಕೆ.ಎನ್.ಪ್ರವೀಣ್ ರಾವ್ ಪಾಲ್ಗೊಂಡಿದ್ದರು.