ಚೆಟ್ಟಳ್ಳಿ, ನ. 15: ಕೊಂಡಂಗೇರಿಯ ಕೈ.ವೈ.ಸಿ. ಯುವಕ ಸಂಘ ಹಾಗೂ ಜಿಲ್ಲಾ ಯುವ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೊಂಡಂಗೇರಿಯ ಶಾಲಾ ಮೈದಾನದಲ್ಲಿ 5+2 ಜನರ ಕಾಲ್ಚೆಂಡು ಪಂದ್ಯಾಟ ತಾ. 21 ರಂದು ನಡೆಯಲಿದೆ ಎಂದು ಪಂದ್ಯಾಟದ ಆಯೋಜಕರು ತಿಳಿಸಿದ್ದಾರೆ.

ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ 8762440918, 8277213613, 9481324002 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.