ಸೋಮವಾರಪೇಟೆ, ನ. 15: ಸಮೀಪದ ಸಿದ್ಧಲಿಂಗಪುರ-ಅಳಿಲುಗುಪ್ಪೆ ಗ್ರಾಮದ ಶ್ರೀಮಂಜುನಾಥ ಮತ್ತು ನಾಗಕ್ಷೇತ್ರದಲ್ಲಿ ಪಂಚಮಿ ಮತ್ತು ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ಮಂಜುನಾಥ ದೇವರಿಗೆ ರುದ್ರಾಭಿಷೇಕ, ನಾಗ ಕ್ಷೇತ್ರದಲ್ಲಿ ಪಂಚಮಿ ಪೂಜೆ ನಡೆಯಿತು. ರಾತ್ರಿ ಕಾರ್ತಿಕ ಸೋಮವಾರದ ಅಂಗವಾಗಿ ಎರಡೂ ಕ್ಷೇತ್ರಗಳಲ್ಲಿ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ನರೆದಿದ್ದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಸಮಿತಿ ಪದಾಧಿಕಾರಿ ನಾಪಂಡ ಮುದ್ದಪ್ಪ, ದೇವಾಲಯದ ಮುಖ್ಯಸ್ಥ ರಾಜೇಶ್‍ನಾಥ್‍ಜಿ ಇದ್ದರು. ಪೂಜಾ ಕೈಂಕರ್ಯಗಳು ಪ್ರಧಾನ ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ಜರುಗಿತು.