ಮಡಿಕೇರಿ, ನ. 15: ನಗರದ ಸುದರ್ಶನ ಅತಿಥಿ ಗೃಹದ ಹಿಂಭಾಗ ಮುನೀಶ್ವರ ದೇವಾಲಯದ ಬಳಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಲು ಮಂಜೂರಾಗಿರುವ ಜಾಗದಲ್ಲಿ ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕೆಲವರು ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪೌರ ಕಾರ್ಮಿಕರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ನಿವೃತ್ತ ಪೊಲೀಸ್ ಕಾವೇರಪ್ಪ, ನಗರಸಭಾ ಮಾಜಿ ಸದಸ್ಯ ವಿಜಯಕುಮಾರ್ ಮತ್ತಿತರರು ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ತಡೆಯೊಡ್ಡುತ್ತಿರು ವದಾಗಿ ಪೌರ ಕಾರ್ಮಿಕರು ಮನವಿಯಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಪೌರ ಕಾರ್ಮಿಕರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸುವ ದಾಗಿಯೂ ಎಚ್ಚರಿಕೆಯಿತ್ತಿದ್ದಾರೆ.