ನಾಪೆÇೀಕ್ಲು, ನ. 14: ಬಿಜೆಪಿ ರಾಷ್ಟ್ರೀಯ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು. ನಾಪೆÉÇೀಕ್ಲು ಬಿಜೆಪಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಹಿರಿಯ ಕಾರ್ಯಕರ್ತ ಎಂ.ಎಂ.ನರೇಂದ್ರ, ಶಿವಚಾಳಿಯಂಡ ಜಗದೀಶ್, ಅರೆಯಡ ಅಶೋಕ್, ಪಾಡಿಯಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ, ಚೀಯಕಪೂವಂಡ ಗಣೇಶ್, ಚೋಕಿರ ಸಜಿತ್, ತಿರೋಡಿರ ರಾಜ, ಚೀಯಕಪೂವಂಡ ಪ್ರಭು, ಅಜ್ಜೆಟ್ಟಿರ ವಿಠಲ, ಅಜ್ಜೆಟ್ಟಿರ ಬೋಪಣ್ಣ, ಮಣವಟ್ಟಿರ ಡಿಕ್ಕಾ ಮುತ್ತಣ್ಣ, ಪಾಡಿಯಮ್ಮಂಡ ಯೋಗೀಶ್, ಸಂಪತ್ ಮತ್ತಿತರರು ಇದ್ದರು.